ಬೈತಡ್ಕ ಸೇತುವೆ ಹತ್ತಿರ ಕಾರು ನದಿಗೆ ಉರುಳಿ ಇಬ್ಬರು ಯುವಕರು ಸೋಮವಾರ ನಾಪತ್ತೆಯಾಗಿದ್ದರು. ನಿರಂತರ ಶೋಧನೆಯ ಬಳಿಕ ಇಬ್ಬರೂ ಯುವಕರ ಮೃತದೇಹ ಇಂದು ಮಂಗಳವಾರ ಬೆಳಿಗ್ಗೆ ಪತ್ತೆಯಾಗಿವೆ.
ಸೋಮವಾರ ಇಬ್ಬರು ಯುವಕರು ಮಂಜೇಶ್ವರ್ ದಿಂದ ಸುಬ್ರಮಣ್ಯಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಕನಿಯೂರ್ ಹತ್ತಿರದ ಬೈತಡ್ಕದಲ್ಲಿನ ಸೇತುವೆಯಲ್ಲಿ ಕಾರು ನದಿಗೆ ಉರುಳಿ ಬಿದ್ದಿತ್ತು.
ಕಲವು ಘಂಟೆಗಳ ಬಳಿಕ ಕಾರನ್ನು ನದಿಯಿಂದ ಮೇಲೆತ್ತಲಾಗಿತ್ತು. ಆದರೆ, ಯುವಕರು ನಾಪತ್ತೆಯಾಗಿದ್ದರು. ಸೋಮವಾರ ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಯುವಕರನ್ನು ಪತ್ತೆಹಚ್ಚಲು ಅಗ್ನಿಶಾಮಕ ದಳ ಮತ್ತು ಪೊಲೀಸರು ಹರಸಾಹಸ ಪಟ್ಟಿದ್ದರು. ಆದರೆ, ಯುವಕರನ್ನು ಪತ್ತೆಹೆಚ್ಚಲು ಸಾಧ್ಯವಾಗಿರಲಿಲ್ಲ.
ಮಂಗಳವಾರ ಬೆಳಿಗ್ಗೆ ಧನುಷ್ (25) ಹಾಗೂ ಈತನ ಸಂಬಂಧಿ ಧನಂಜಯ್ (21) ಅವರ ಮೃತದೇಹ ಪತ್ತೆಯಾಗಿವೆ. ಕಾರು ನದಿಗೆ ಉರುಳಿದ 200 ಮೀ. ಅಂತರದಲ್ಲಿ ಒಂದು ಒಬ್ಬರ ಮೃತದೇಹ ಹಾಗೂ 109 ಮೀ. ಅಂತರದಲ್ಲಿ ಮತ್ತೊಂದು ಮೃತದೇಹಗಳು ಪತ್ತೆಯಾಗಿವೆ.
ಕರಾವಳಿ ಭಾಗದಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಬೈತಡ್ಕ ಹತ್ತಿರದ ಗೌರಿ ನದಿ ತುಂಬಿ ಹರಿಯುತ್ತಿದೆ.