ವಾಸ್ತು ಪ್ರಕಾರ, ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಾಸ್ತು ನಿಯಮವಿದೆ. ಮನೆಯಲ್ಲಿನ ಪ್ರತಿಯೊಂದು ವಸ್ತುವನ್ನು ಕೂಡ ಆ ಪ್ರಕಾರವೇ ಇಡಬೇಕು. ಇದೇ ರೀತಿ ಮನೆಯ ಕಸದ ಬುಟ್ಟಿ ಇಡುವುದಕ್ಕೂ ತನ್ನದೇ ಆದ ಸರಿಯಾದ ದಿಕ್ಕು ಇದೆ. ವಾಸ್ತು ಶಾಸ್ತ್ರದ ಪ್ರಕಾರ, ನೀವು ಡಸ್ಟ್ಬಿನ್ ಅನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ತಪ್ಪಾದ ಜಾಗದಲ್ಲಿ ಕಸದ ಬುಟ್ಟಿ ಇಟ್ಟರೆ ನಕಾರಾತ್ಮಕ ಶಕ್ತಿ ಹರಡುತ್ತದೆ. ಮನೆಯಲ್ಲಿ ಆರ್ಥಿಕ ತೊಂದರೆ ಎದುರಾಗುತ್ತದೆ. ಅದಕ್ಕಾಗಿಯೇ ಡಸ್ಟ್ಬಿನ್ ಅನ್ನು ಇರಿಸುವಾಗ, ಸರಿಯಾಗಿ ಕಾಳಜಿ ವಹಿಸುವುದು ಬಹಳ ಮುಖ್ಯ. ಹಾಗಾಗಿ ಮನೆಯಲ್ಲಿ ಕಸದಬುಟ್ಟಿಯನ್ನು ಯಾವ ಜಾಗದಲ್ಲಿ ಇಡಬಾರದು ಇಟ್ಟರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.
ಈಶಾನ್ಯದಲ್ಲಿ ಕಸದ ಬುಟ್ಟಿ ಇಡಬೇಡಿ
ವಾಸ್ತು ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡಬೇಡಿ. ಡಸ್ಟ್ಬಿನ್ ಅನ್ನು ಈ ದಿಕ್ಕಿನಲ್ಲಿ ಇಡುವುದರಿಂದ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಡಸ್ಟ್ಬಿನ್ ಅನ್ನು ಈ ದಿಕ್ಕಿನಲ್ಲಿ ಇಡುವುದರಿಂದ ನಿಮಗೆ ಒತ್ತಡ ಮತ್ತು ಅನಿಶ್ಚಿತತೆಯ ಭಾವನೆ ಉಂಟಾಗುತ್ತದೆ.
ಆಗ್ನೇಯ ದಿಕ್ಕಿನಲ್ಲಿ ಕಸದ ಬುಟ್ಟಿ ಇಡಬಾರದು
ವಾಸ್ತು ಪ್ರಕಾರ, ನೀವು ಮನೆಯ ಆಗ್ನೇಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಟ್ಟರೆ, ನೀವು ಹಣವನ್ನು ಸಂಗ್ರಹಿಸುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಹಣವೂ ಹೆಚ್ಚು ಹೆಚ್ಚು ನಿಷ್ಪ್ರಯೋಜಕ ವಸ್ತುಗಳಿಗೆ ಖರ್ಚಾಗುತ್ತದೆ.
ಪೂರ್ವದಲ್ಲಿ ಕಸದ ಬುಟ್ಟಿ ಇಡಬಾರದು
ಡಸ್ಟ್ಬಿನ್ ಅನ್ನು ನಿಮ್ಮ ಮನೆಯ ಪೂರ್ವ ಪ್ರದೇಶದಲ್ಲಿ ಇಡಬಾರದು. ಇಲ್ಲಿ ಇಟ್ಟುಕೊಳ್ಳುವುದರಿಂದ ನೀವು ಒಂಟಿತನವನ್ನು ಅನುಭವಿಸುತ್ತೀರಿ. ನೀವು ಹೊರಗೆ ಹೋಗಲು ಮತ್ತು ಜನರನ್ನು ಭೇಟಿ ಮಾಡಲು ಬಯಸುವುದಿಲ್ಲ. ಅಲ್ಲದೆ ಇದು ನಿಮ್ಮ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ.
ಉತ್ತರ ದಿಕ್ಕಿನಲ್ಲಿ ಕಸದ ಬುಟ್ಟಿ ಇಡಬೇಡಿ
ವಾಸ್ತು ಪ್ರಕಾರ, ನೀವು ಮನೆಯ ಉತ್ತರ ದಿಕ್ಕಿನಲ್ಲಿ ಡಸ್ಟ್ಬಿನ್ ಅನ್ನು ಇರಿಸಿದಾಗ, ಉದ್ಯೋಗ ಮತ್ತು ವೃತ್ತಿ ಅವಕಾಶಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಆದ್ದರಿಂದ, ಈ ದಿಕ್ಕಿನಲ್ಲಿಯೂ ಡಸ್ಟ್ಬಿನ್ಗಳನ್ನು ಇಡುವುದನ್ನು ತಪ್ಪಿಸುವುದು ಸೂಕ್ತ.
ಕಸದ ಬುಟ್ಟಿ ಇಲ್ಲಿರಲಿ
ವಾಸ್ತು ಶಾಸ್ತ್ರದ ಪ್ರಕಾರ, ಕಸದ ಬುಟ್ಟಿಯನ್ನು ಇಡಲು ಉತ್ತಮ ಸ್ಥಳವೆಂದರೆ ದಕ್ಷಿಣ ಅಥವಾ ನೈರುತ್ಯ ಭಾಗ. ಕಸದ ಬುಟ್ಟಿಯನ್ನು ಇಲ್ಲಿ ಇಡುವುದರಿಂದ ವ್ಯಕ್ತಿಯ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬರುತ್ತವೆ. ಇದರ ಜೊತೆಗೆ ಮನೆಯಲ್ಲಿ ಪ್ರಗತಿ ಉಂಟಾಗುತ್ತೆ.