ಅಸ್ಸಾಂನ (Assam) ಕರೀಂಗಂಜ್ ಜಿಲ್ಲೆಯಲ್ಲಿ 4,700 ಕೆ.ಜಿಗೂ ಅಧಿಕ ಪ್ರಮಾಣದ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದ ಅತಿ ದೊಡ್ಡ ಮಾದಕವಸ್ತು ಸಾಗಣೆ ಪ್ರಕರಣಗಳಲ್ಲಿ ಇದು ಸಹ ಒಂದಾಗಿದೆ ಎಂದೂ ಅವರು ಹೇಳಿದ್ದಾರೆ.
ಅಸ್ಸಾಂ (Assam) ಪೊಲೀಸರು ಸೋಮವಾರ ಚುರೈಬರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಯಮಿತ ತಪಾಸಣೆಯ ನಡೆಸುತ್ತಿದ್ದ ಸಂದರ್ಭ ನಿಷಿದ್ಧ ವಸ್ತುಗಳನ್ನು ಟ್ರಕ್ನಲ್ಲಿ ಸಾಗಿಸುತ್ತಿದ್ದದ್ದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು : 60 ಲಕ್ಷ ರೂ ಮೌಲ್ಯದ 200 ಕೆ.ಜಿ ಗಾಂಜಾ ವಶ
ನೆರೆಯ ರಾಜ್ಯದಿಂದ ಬರುತ್ತಿದ್ದ ಟ್ರಕ್ನಲ್ಲಿ ನೈಸರ್ಗಿಕ ರಬ್ಬರ್ ಹಾಳೆಗಳ ಅಡಿಯಲ್ಲಿ ಅಡಗಿಸಿ ಇಡಲಾಗಿದ್ದ 4,728 ಕೆ.ಜಿಗೂ ಅಧಿಕ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.
In largest seizure in a while by @assampolice, @karimganjpolice seized 4,728 kg ganja hidden under sheets of natural rubber in a truck coming from a neighbouring state on Monday.
Great work! Keep it up 👍@DGPAssamPolice @CMOfficeAssam pic.twitter.com/Rht1iGCzJU
— Himanta Biswa Sarma (Modi Ka Parivar) (@himantabiswa) August 30, 2022
ಪೊಲೀಸ್ ಚೆಕ್ಪಾಯಿಂಟ್ ಅನ್ನು ನೋಡಿದ ಚಾಲಕ ಕೂಡಲೇ ವಾಹನವನ್ನು ನಿಲ್ಲಿಸಿ ಕತ್ತಲೆಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಟ್ರಕ್ ಅನ್ನು ಸಂಪೂರ್ಣವಾಗಿ ಶೋಧಿಸಿ ರಬ್ಬರ್ ಶೀಟ್ಗಳ ಅಡಿಯಲ್ಲಿ ಇದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ತ್ರಿಪುರಾದಿಂದ ಟ್ರಕ್ ಅಸ್ಸಾಂಗೆ ಬರುತ್ತಿತ್ತು. ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ : ಮುಂಬೈ ವಿಮಾನ ನಿಲ್ದಾಣದಲ್ಲಿ 247 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ