Kamal R Khan : ವಿಮರ್ಶಕ, ನಟ ಕೆಆರ್​ಕೆ ಬಂಧನ

Kamal R Khan

ವಿವಾದಾತ್ಮಕ ಟ್ವೀಟ್​ಗಳು ಮತ್ತು ತಮ್ಮದೇ ಶೈಲಿಯ ಚಿತ್ರಗಳ ವಿಮರ್ಶೆಯ ಮೂಲಕ ಸುದ್ದಿಯಲ್ಲಿರುವ ನಟ ಕಮಲ್ ಆರ್​ ಖಾನ್ (Kamal R Khan) ಅವರನ್ನು ಇಂದು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕೆಆರ್​ಕೆ ಎಂದೇ ಪ್ರಸಿದ್ಧವಾಗಿರುವ ನಟ ಕಮಲ್ ಆರ್ ಖಾನ್ 2020 ರಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಈ ಟ್ವೀಟ್​​ಗೆ ಪ್ರತಿರೋಧ ವ್ಯಕ್ತಪಡಿಸಿ ಯುವ ಸೇನಾ ಸದಸ್ಯರಾದ ರಾಹುಲ್ ಕನಾಲ್​ ಎನ್ನುವವರು ಪ್ರಕರಣ ದಾಖಲಿಸಿದ್ದರು.

ಇದೀಗ, ಮುಂಬೈ ಪೊಲೀಸರು ಕೆಆರ್​ಕೆ (Kamal R Khan) ಅವರನ್ನು ಮುಂಬೈನ ವಿಮಾನ ನಿಲ್ದಾಣದಲ್ಲಿ ಮಲಾಡ್ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ‘ನ್ಯಾನೋ ನಾರಾಯಣಪ್ಪ’ ಆದ ಕೆಜಿಎಫ್​ ತಾತ – ಫಸ್ಟ್ ಲುಕ್ ರಿಲೀಸ್

ವಿವಾದಾತ್ಮಕ ಟ್ವೀಟ್‌ಗಳಿಂದ ಹೆಸರುವಾಸಿಯಾಗಿರುವ ಕೆಆರ್‌ಕೆ ಆಲಿಯಾಸ್ ಕಮಾಲ್ ಆರ್ ಖಾನ್ 2020 ರಲ್ಲಿ ಇರ್ಫಾನ್ ಹಾಗೂ ರಿಶಿ ಕಪೂರ್‌ರನ್ನು ಗುರಿಯಾಗಿರಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಟ್ವೀಟ್‌ ಮಾಡಿದ್ದರು. ಈ ಸಂಬಂಧಿತವಾಗಿ 2020 ರಲ್ಲಿ ಕೆಆರ್‌ಕೆ ವಿರುದ್ಧ ನಿಗಾವಣೆ ನೋಟೀಸ್ ಜಾರಿ ಮಾಡಲಾಯಿತು ಹಾಗೂ ನಟನ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು.

ಯುವ ಸೇನಾ ಸದಸ್ಯರಾದ ರಾಹುಲ್ ಕನಾಲ್ ಕೆಆರ್‌ಕೆ ವಿರುದ್ಧ ದೂರು ದಾಖಲಿಸಿದ್ದಾರೆ. ಕೆಆರ್‌ಕೆಯನ್ನು ರಾತ್ರಿ 11 ಗಂಟೆಗೆ ಬೋರಿವಿಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಕೆಆರ್‌ಕೆಯನ್ನು ಐಪಿಸಿ ಸೆಕ್ಷನ್ 153A, 294, 500, 501, 505, 67, 98 ಅಡಿಯಲ್ಲಿ ಬಂಧಿಸಲಾಗಿದೆ.

ನಟ ಕೆಆರ್​ಕೆ ಕನ್ನಡದ ಖ್ಯಾತ ಚಿತ್ರ ಕೆಜಿಎಫ್-2 ಚೆನ್ನಾಗಿಲ್ಲ ಎಂದು ವಿಮರ್ಶೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ : ನಟ ಚೇತನ್​ಗೆ 14 ದಿನ ನ್ಯಾಯಾಂಗ ಬಂಧನ

LEAVE A REPLY

Please enter your comment!
Please enter your name here