ತಮಿಳುನಾಡು ಬಿಜೆಪಿ ಅಧ್ಯಕ್ಷ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರ ವಿರುದ್ಧ ತಮಿಳುನಾಡು ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್ ಅವರು ಸರಣಿ ಟ್ವೀಟ್ಗಳ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
ನಟಿ, ನೃತ್ಯನಿರ್ದೇಶಕಿ ಮತ್ತು ನಿರ್ದೇಶಕಿಯೂ ಆಗಿರುವ ಗಾಯತ್ರಿ ರಘುರಾಮ್ ಅವರು ಅಣ್ಣಾಮಲೈ ಒಬ್ಬ ಸುಳ್ಳ ಮತ್ತು ಅಧರ್ಮಿ ಎಂದು ಕಿಡಿಕಾರಿದ್ದಾರೆ.
ಆರು ತಿಂಗಳ ಹಿಂದೆ ಪಕ್ಷದಿಂದ ಅಮಾನಾತ್ತಾಗಿದ್ದ ಗಾಯತ್ರಿ ರಘುರಾಮ್ ಅವರು ಬಿಜೆಪಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ನಾನು ಪೊಲೀಸರಿಗೆ ದೂರು ನೀಡಲು ಸಿದ್ಧ ಮತ್ತು ಎಲ್ಲ ವೀಡಿಯೋ ಮತ್ತು ಆಡಿಯೋಗಳನ್ನು ಸಲ್ಲಿಸಲು ಸಿದ್ಧ. ಅಣ್ಣಾಮಲೈ ಅವರ ಬಗ್ಗೆ ಮುಂದಿನ ತನಿಖೆ ಬಗ್ಗೆ. ವಾರ್ ರೂಂ ನನಗೆ ಕಿರುಕುಳ ನೀಡ್ತಿದೆ
ಎಂದು ಅಣ್ಣಾಮಲೈ ಬೆಂಬಲಿಗರು ನೀಡುತ್ತಿರುವ ಕಿರುಕುಳದ ಬಗ್ಗೆ ಗಾಯತ್ರಿ ರಘುರಾಮ್ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ವಿಚಾರಣೆಗೆ ಅವಕಾಶ, ಸಮಾನ ಹಕ್ಕು ಮತ್ತು ಮಹಿಳೆಯರಿಗೆ ಗೌರವ ನೀಡದ ಕಾರಣಕ್ಕಾಗಿ ನಾನು ಭಾರವಾದ ಮನಸ್ಸಿನಿಂದ ತಮಿಳುನಾಡು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತರಲ್ಲ.
ಕಾರ್ಯಕರ್ತರ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ, ನಿಜವಾದ ಬೆಂಬಲಿಗರನ್ನು ಅಣ್ಣಾಮಲೈ ಬೆನ್ನಟ್ಟುತ್ತಿರುವುದು ಮಾತ್ರ ಏಕೈಕ ಗುರಿಯಾಗಿದೆ. ನಾನು ಬಿಜೆಪಿಗೆ ಒಳ್ಳೆಯದ್ದನ್ನು ಬಯಸುತ್ತಿದ್ದೇನೆ.
ಮೋದಿಜೀ ನೀವು ನನಗೆ ವಿಶೇಷ, ನೀವು ರಾಷ್ಟ್ರಪಿತ, ನೀವು ಯಾವತ್ತಿದ್ದರೂ ನನ್ನ ವಿಶ್ವಗುರು ಮತ್ತು ಶ್ರೇಷ್ಠ ನಾಯಕ. ಅಮಿತ್ ಶಾ ಜೀ ನೀವು ಯಾವತ್ತೂ ನನ್ನ ಚಾಣಕ್ಯ ಗುರುವಾಗಿರುತ್ತೀರಿ.
ಇವತ್ತು ನಾನು ಈ ಆತುರದ ನಿರ್ಧಾರ ಕೈಗೊಳ್ಳಲು ಕಾರಣ ಅಣ್ಣಾಮಲೈ. ಅಣ್ಣಾಮಲೈ ಒಬ್ಬ ಕಳಪೆ ಕುತಂತ್ರದ ಸುಳ್ಳ ಮತ್ತು ಅಧರ್ಮ ನಾಯಕ.
ನಾನು ಎಂಟು ವರ್ಷಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ ಎಲ್ಲ ಕಾರ್ಯಕರ್ತರಿಗೆ ನನ್ನ ಧನ್ಯವಾದಗಳು. ಅದು ಅದ್ಭುತ ಪ್ರಯಾಣ.
ಇನ್ನೊಬ್ಬರನ್ನು ನೋಯಿಸುವುದು ಹಿಂದೂ ಧರ್ಮವಲ್ಲ. ಅಣ್ಣಾಮಲೈ ನಾಯಕತ್ವದಡಿ ನಾನು ಮುಂದುವರಿಯಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಮಹಿಳೆಯರೇ ಸುರಕ್ಷಿತವಾಗಿರಿ, ಇನ್ನೊಬ್ಬರು ನಿಮ್ಮನ್ನು ರಕ್ಷಣೆ ಮಾಡುತ್ತಾರೆ ಎನ್ನುವುದನ್ನು ನಂಬಬೇಡಿ. ಯಾರೂ ಕೂಡಾ ಬರಲ್ಲ. ನಿಮಗೆ ನೀವೇ ಗತಿ. ನಿಮ್ಮನ್ನು ನೀವು ನಂಬಿಯಷ್ಟೇ. ನಿಮಗೆ ಗೌರವ ಇಲ್ಲದ ಕಡೆಯಲ್ಲಿ ಇರಬೇಡಿ.
ಎಂದು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಅಣ್ಣಾಮಲೈ ಅವರನ್ನು ಜೋಕರ್ ಎಂದೂ ಗಾಯತ್ರಿ ರಘುರಾಮ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿರುವ ಜೋಕರ್ನ ವಾರ್ ರೂಂ, ತಮಿಳುನಾಡು ಬಿಜೆಪಿ ಯುವ ಮೋರ್ಚಾ, ಅಮೆರಿಕ ಮತ್ತು ಕೋವೈನಲ್ಲಿರುವ ಜೋಕರ್ನ ವಾರ್ ರೂಂನಲ್ಲಿ ಅವರದ್ದೇ ಪಕ್ಷದ ಮಹಿಳೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಆ ಜೋಕರ್ ಈ ಕಳಪೆ ಥ್ರಿಲ್ನ್ನು ಖುಷಿಪಡುತ್ತಿದ್ದಾನೆ. ಸತ್ಯ ಏನಿದೆಯೋ ಅದನ್ನು ನಾನು ಹೇಳುತ್ತೇನೆ, ಅರಗಿಸಿಕೊಳ್ಳಲು ಆಗ್ತಿಲ್ವಾ.. ಬರ್ನಲ್ ಯೂಸ್ ಮಾಡಿ.
ಈ ಜೋಕರ್ಗೆ ಬಿಲ್ಡಪ್ ಕೊಡುವ ಸಲುವಾಗಿ ಸಿಕ್ಕಾಪಟ್ಟೇ ದುಡ್ಡು ಖರ್ಚು ಮಾಡಲಾಗುತ್ತಿದೆ ಮತ್ತು ಹಲವಾರು ವಾರ್ ರೂಂಗಳು ಆತನನ್ನು ರಕ್ಷಿಸಲು ಕೆಲಸ ಮಾಡುತ್ತಿವೆ. ಎಲ್ಲವೂ ವ್ಯರ್ಥ.
ಮಹಿಳೆಯರ ರಕ್ಷಣೆ ಬಗ್ಗೆ ಈ ಜೋಕರ್ ಮಾತನಾಡುತ್ತಿರುವುದು ವರ್ಷದ ಅತೀ ದೊಡ್ಡ ಜೋಕ್
ಎಂದು ಗಾಯತ್ರಿ ರಘುರಾಮ್ ಸರಣಿ ಟ್ವೀಟ್ ಮಾಡಿದ್ದಾರೆ.
ADVERTISEMENT
ADVERTISEMENT