ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ (Child Porn) ಸಂಬಂಧಿಸಿದ ಆಡಿಯೋ, ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪದಡಿ ದೇಶದ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 56 ಸ್ಥಳಗಳ ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ಆಪರೇಷನ್ ‘ಮೇಘ ಚಕ್ರ’ದ ಭಾಗವಾಗಿ ಈ ಶೋಧ ನಡೆಸಲಾಗುತ್ತಿದೆ.
ಕ್ಲೌಡ್ ಸ್ಟೋರೇಜ್ ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಚೈಲ್ಡ್ ಪೋರ್ನ್ ದಂಧೆ ನಡೆಸುತ್ತಿದ್ದ ಪೆಡ್ಲರ್‌ಗಳ ವಿರುದ್ಧ ಕಳೆದ ವರ್ಷ ನಡೆದ ಆಪರೇಷನ್ ಕಾರ್ಬನ್ ದಾಳಿ ಸಮಯದಲ್ಲಿ ಪಡೆದ ಗುಪ್ತಚರ ಮಾಹಿತಿ ಮತ್ತು ಸಿಂಗಾಪುರದ ಇಂಟರ್‌ಪೋಲ್ ಮಾಹಿತಿ ಆಧರಿಸಿ ಈ ದಾಳಿ ನಡೆದಿದೆ.
ಅಪ್ರಾಪ್ತರ ಲೈಂಗಿಕ ಚಟುವಟಿಕೆಗಳ ಆಡಿಯೋ-ವಿಡಿಯೋ ದೃಶ್ಯಗಳನ್ನು ಪ್ರಸಾರ ಮಾಡಲು ಪೆಡ್ಲರ್‌ಗಳು ಬಳಸುವ ಕ್ಲೌಡ್ ಸ್ಟೋರೇಜ್ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ.
ದೇಶದಾದ್ಯಂತ ಇರುವ ಚೈಲ್ಡ್ ಪೋರ್ನ್ (Child Porn) ವಿಡಿಯೋ ಪೆಡ್ಲರ್‌ಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಕ್ಕಳ ಅಶ್ಲೀಲ ಪ್ರಕರಣಗಳ ಮೇಲೆ ನಿಗಾ ಇಡಲು ಇರುವ ಕಾರ್ಯವಿಧಾನದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಕಳೆದ ವಾರ ಸುಪ್ರೀಂ ಕೋರ್ಟ್ ಕೇಂದ್ರವನ್ನು ಕೇಳಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂಟರ್ನೆಟ್ ಕಂಪನಿಗಳಿಂದ ವರದಿಯನ್ನು ಕೇಳಿದೆ.
ಇದನ್ನೂ ಓದಿ : NIA ದಾಳಿ ವಿರೋಧಿಸಿ PFI ಪ್ರತಿಭಟನೆ : FIR ದಾಖಲಿಸಲು ಹೈಕೋರ್ಟ್ ಸೂಚನೆ