ಗುರುವಾರ ರಾಷ್ಟ್ರಾದ್ಯಂತ ರಾಷ್ಟ್ರೀಯ ತನಿಖಾ ಆಯೋಗ (NIA) ಫಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ (PFI)ದ ಕಚೇರಿಗಳು ಮತ್ತು ನಾಯಕರ ಮನೆ ಮೇಲೆ ದಾಳಿ ನಡೆಸಿತ್ತು. 100 ಜನ ನಾಯಕರನ್ನು ಬಂಧಿಸಿತ್ತು. ಇದನ್ನು ವಿರೋಧಿಸಿ ಇಂದು ಕೇರಳದಲ್ಲಿ ಪಿಎಫ್ಐ ಮುಖಂಡರು ಪ್ರತಿಭಟನೆ ಇಳಿದಿದ್ದಾರೆ. ಅನುಮತಿ ಪಡೆಯದೇ ಪ್ರತಿಭಟನೆ ನಡೆಸುತ್ತಿರುವ ಪಿಎಫ್ಐ ವಿರುದ್ಧ ಕೇರಳ ಹೈಕೋರ್ಟ್ ಎಫ್ಐಆರ್ ದಾಖಲಿಸಲು ಸೂಚನೆ ನೀಡಿದೆ.
ಕೇರಳ ಹೈಕೋರ್ಟ್ 2019 ರಲ್ಲಿ 7 ದಿನಗಳ ನೋಟಿಸ್ ಅವಧಿಯ ನಂತರ ಮಾತ್ರವೇ ರಾಜ್ಯಾದ್ಯಂತ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ಅನುಮತಿ ನೀಡಿತ್ತು. ಏಕಾಏಕಿ ನಡೆಸುವ ಪ್ರತಿಭಟನೆಯನ್ನು ಹೈಕೋರ್ಟ್ ಬ್ಯಾನ್ ಮಾಡಿತ್ತು. ಇದೀಗ, ಪಿಎಫ್ಐ ಏಕಾಏಕಿ ಪ್ರತಿಭಟನೆ ನಡೆಸಿರುವುದರಿಂದ ಹೈಕೋರ್ಟ್ ಪ್ರಕರಣ ದಾಖಲಿಸಲು ಕೇರಳ ಪೊಲೀಸರಿಗೆ ಸೂಚಿಸಿದೆ.
ಅಲ್ಲದೇ, ರಾಜ್ಯಾದ್ಯಂತ ನಡೆದಿರುವ ಗಲಭೆಗಳಿಗೆ ಸಂಬಂಧಿಸಿದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಇದನ್ನೂ ಓದಿ : Anti-national conspiracy : PFI ಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಎನ್ಐಎ ದಾಳಿ
ಎಡಿ ಜೊತೆ ಎನ್ಐಎ ದೇಶದ 15ಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಕಚೇರಿಗಳ ಮೇಲೆ ಹಾಗೂ ಇದರ ನಾಯಕರುಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿತ್ತು. ಈ ದಾಳಿ ಗುರುವಾರ ಬೆಳಿಗ್ಗೆ 6 ಸಾಯಂಕಾಲ 6 ಗಂಟೆಯವರೆಗೆ ನಡೆಸಿತ್ತು. ಇಷ್ಟು ದೊಡ್ಡ ಮಟ್ಟದ ದಾಳಿ ಇಡೀ ದೇಶದಲ್ಲಿ ಇದೇ ಮೊದಲನೆಯದಾಗಿದೆ ಎನ್ನಲಾಗುತ್ತಿದೆ.
ದೇಶದಾದ್ಯಂತ 100 ಜನ ಪಿಎಸ್ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದರಲ್ಲಿ ಅತಿಹೆಚ್ಚು ಕೇರಳದ 22 ಜನರನ್ನು ಎನ್ಐಎ ಬಂಧಿಸಿ ಕರೆದ್ಯೊಯ್ದಿದೆ.
ಕೇರಳ ಪಿಎಫ್ ಘಟಕ ನಜ್ಞತಮ್ಮ ನಾಯಕರ ಬಂಧನವನ್ನು ಅನ್ಯಾಯ ಎಂದು ಖಂಡಿಸಿದೆ. ಅಲ್ಲದೇ, ಇಂದು ಸೆಪ್ಟಂಬರ್ 23 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಈಮದು ಪ್ರತಿಭಟನೆಗೆ ಇಳಿದಿದ್ದ ಪಿಎಫ್ಐ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸರ್ಕಾರದ ಬಸ್ ಮತ್ತಿತರ ಸ್ಥಳಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಗಳು ಕೇರಳದಲ್ಲಿ ವರದಿಯಾಗಿದೆ.
2006 ರಲ್ಲಿ ರಚನೆಯಾದ ಪಿಎಫ್ಐ ಭಾರತದ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡಿದೆ. ಆದರೆ, ಇದು ಮೂಲಭೂತವಾದ ಇಸ್ಲಾಂ ಧರ್ಮವನ್ನು ಉತ್ತೇಜಿಸುತ್ತಿದೆ ಎಂದು ದೇಶದ ಕಾನೂನು ಜಾರಿ ಸಂಸ್ಥೆಗಳು ಹೇಳಿವೆ.
ಇದನ್ನೂ ಓದಿ : BIG BREAKING: ಕರ್ನಾಟಕ ಒಳಗೊಂಡು 10 ರಾಜ್ಯಗಳಲ್ಲಿ NIAಯಿಂದ PFI ಬೇಟೆ, 100 ಮಂದಿ ಅರೆಸ್ಟ್