BREAKING: ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ – NCP ವಿಭಜನೆ – ಅಜಿತ್​ ಪವಾರ್​ DCM

ಮಹಾರಾಷ್ಟ್ರದಲ್ಲಿ ಸಂಭವಿಸಿದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಶರದ್​ ಪವಾರ್​ ಅವರ ಅಣ್ಣನ ಮಗ ಅಜಿತ್​ ಪವಾರ್​ ಎನ್​ಸಿಪಿಯಿಂದ ಹೊರಬಂದಿದ್ದಾರೆ. ಈ ಮೂಲಕ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಯಾಗಿದ್ದಾರೆ.

ಅಜಿತ್​ ಪವಾರ್​ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್​ ಅವರ ಜೊತೆಗೆ ಇವರು ಡಿಸಿಎಂ ಹುದ್ದೆ ಹಂಚಿಕೊಳ್ಳಲಿದ್ದಾರೆ.

ಅವರ ಜೊತೆಗೆ ಎನ್​ಸಿಪಿಯ 8 ಮಂದಿ ಶಾಸಕರು ಕೂಡಾ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹಿರಿಯ ಎನ್​ಸಿಪಿ ನಾಯಕ ಛಗನ್​ ಭುಜಬಲ್​, ಹಸನ್​ ಮುಶ್ರಿಫ್​, ವಾಲ್ಸೆ ಪಾಟೀಲ್​, ಧನಂಜಯ್​ ಮುಂಡೆ, ಅದಿತಿ ತಟ್ಕರೆ, ಅನಿಲ್​ ಭಾಯ್​ದಾಸ್​ ಪಾಟೀಲ್​, ಬಾಬುರಾವ್​ ಆತ್ಮಾರಾಮ್​, ಸಂಜಯ್​ ಬನ್ಸೋಡೆ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಲಿಸಲಿದ್ದಾರೆ.

ಈ ಮೂಲಕ ಶರದ್​ ಪವಾರ್​ ಅವರ ಪಕ್ಷ ಎನ್​ಸಿಪಿ ವಿಭಜನೆಯಾಗಿದೆ.

ಅಜಿತ್​ ಪವಾರ್​ ಬಣದಲ್ಲಿ ಎನ್​ಸಿಪಿಯ 43 ಮಂದಿ ಶಾಸಕರಿದ್ದಾರೆ. ಬಿಜೆಪಿ ಮತ್ತು ಏಕನಾಥ್​ ಶಿಂಧೆ ಬಣದ ಸಮ್ಮಿಶ್ರ ಸರ್ಕಾರಕ್ಕೆ ಈ ಶಾಸಕರು ಬೆಂಬಲ ಘೋಷಿಸಿ ರಾಜ್ಯಪಾಲರಿಗೆ ಪತ್ರ ರವಾನಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸ್ಥಾನ ಬೇಡ ಎಂದಿದ್ದ ಅಜಿತ್​ ಪವಾರ್​ ಅವರು ಎನ್​ಸಿಪಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಶರದ್​ ಪವಾರ್​ ಆ ಬೇಡಿಕೆಯನ್ನು ನಿರಾಕರಿಸಿದ್ದರು. 

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್​ಸಿಪಿ 54 ಶಾಸಕರನ್ನು ಹೊಂದಿದೆ. 43 ಶಾಸಕರು ಹೊರಬಂದಿರುವ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ನಿಯಮದಿಂದ ಪಾರಾಗಲಿದ್ದಾರೆ.