ಇತ್ತೀಚಿಗಷ್ಟೇ ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ಶುರುವಾಗಿತ್ತು. ಪ್ರಧಾನಿ ಮೋದಿ ವರ್ಚೂವಲ್ ಆಗಿ ಚಾಲನೆ ನೀಡಿದ್ದರು.
ಈ ವಂದೇ ಭಾರತ್ ರೈಲಿಗೆ ಈಗ ದಾವಣಗೆರೆ ಬಳಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಶನಿವಾರ ಧಾರವಾಡದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ.
ಪರಿಣಾಮ ವಂದೇ ಭಾರತ್ ರೈಲಿನ ಸಿ-4 ಬೋಗಿಯ ಕಿಟಕಿ ಗಾಜು ಸೀಳುಬಿಟ್ಟಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.
ಪ್ರಕರಣ ದಾಖಲಿಸಿಕೊಂಡ ರೈಲ್ವೇ ಭದ್ರತಾ ಪಡೆಯ ಪೊಲೀಸರು ತನಿಖೆ ನಡೆಸಿದ್ದಾರೆ.
ADVERTISEMENT
ADVERTISEMENT