ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೋರಿಯಲ್ನಲ್ಲಿ ನರೇಂದ್ರ ಮೋದಿಯವರ 45 ಗಂಟೆಗಳ ಕಾಲ ಧ್ಯಾನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾರೆ.
45 ಗಂಟೆಗಳ ಕಾಲ ಧ್ಯಾನವನ್ನು ಪ್ರಧಾನಿ ಮೋದಿಯವರು ಮನೆಯಲ್ಲಿಯೂ ಮಾಡಬಹುದಿತ್ತು.ಅಲ್ಲಿಗೆ ಹೋಗುವ ಅಗತ್ಯವೇನಿತ್ತು ಅಂತ ಪ್ರಶ್ನಿಸಿರುವ ಖರ್ಗೆ, ಇದಕ್ಕಾಗಿ 10 ಸಾವಿರ ಪೊಲೀಸ್ ಸಿಬ್ಬಂದಿ ಅವರ ಸೆಕ್ಯೂರಿಟಿಗೆ ನಿಂತಿದ್ದಾರೆ. ಯಾಕೆ ಈ ನಾಟಕ? ಇದೇನು ಪ್ರದರ್ಶನ? ಇದು ಒಳ್ಳೆಯದಲ್ಲ ಅಂತ ಖರ್ಗೆ ವ್ಯಂಗ್ಯವಾಡಿದ್ದಾರೆ.
1892ರಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಧ್ಯಾನ ಮಂಟಪದಲ್ಲಿ ಗುರುವಾರ ಸಂಜೆಯಿಂದ ತಮ್ಮ ಧ್ಯಾನವನ್ನ ಪ್ರಾರಂಭಿಸಿರುವ ಮೋದಿ ಜೂನ್ 1, ಶನಿವಾರ ಸಂಜೆವರೆಗೂ ಧ್ಯಾನವನ್ನ ಮುಂದುವರಿಸಲಿದ್ದಾರೆ.