ADVERTISEMENT
ಕರ್ನಾಟಕ ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ಮೊದಲ ಎಕ್ಸಿಟ್ ಪೋಲ್ ಪ್ರಕಟವಾಗಿದೆ.
ಪ್ರಮುಖ ಚುನಾವಣಾ ವಿಶ್ಲೇಷಕ ಗುರುರಾಜ್ ಅಂಜನ್ ಅವರು ತಮ್ಮ ಸಮೀಕ್ಷೆಯನ್ನು ಪ್ರಕಟಿಸಿದ್ದಾರೆ.
ಇವರ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಹೊಸ ದಾಖಲೆಯನ್ನು ನಿರ್ಮಿಸಲಿದೆ.
ಕಾಂಗ್ರೆಸ್ನ್ನು ಹೀನಾಯವಾಗಿ ಸೋಲಿಸುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಜೆಡಿಎಸ್ಗೆ ಭಾರೀ ಮುಖಭಂಗವಾಗಲಿದೆ.
ಗುರುರಾಜ್ ಅಂಜನ್ ಅವರ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್ ಕನಿಷ್ಠ 6 ಕ್ಷೇತ್ರಗಳನ್ನು ಮತ್ತು ಗರಿಷ್ಠ 11 ಕ್ಷೇತ್ರಗಳನ್ನು ಗೆಲ್ಲಬಹುದು.
ಕರ್ನಾಟಕದಲ್ಲಿ ಕಾಂಗ್ರೆಸ್ ಕನಿಷ್ಠ 17 ಮತ್ತು ಗರಿಷ್ಠ 22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬಹುದು.
ಇವರು ಈಗಾಗಲೇ ಪ್ರಕಟಿಸಿರುವ ಕ್ಷೇತ್ರವಾರು ಸಮೀಕ್ಷೆಯ ಪ್ರಕಾರ ದಕ್ಷಿಣ ಕನ್ನಡದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಲಿದೆ. ಉತ್ತರ ಕನ್ನಡದಲ್ಲಿ ಈ ಬಾರಿ ಬಿಜೆಪಿ ಸೋತು ಕಾಂಗ್ರೆಸ್ ಕೇಕೆ ಹಾಕಲಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ ಪ್ರಭಾ ಮಲ್ಲಿಕಾರ್ಜುನ್ ಅವರು ಗೆಲ್ಲಲಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್ನ ಕೆ ವಿ ಗೌತಮ್ ಗೆಲ್ಲಲಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಸೋತು ಶ್ರೇಯಸ್ ಪಟೇಲ್ ಗೆಲ್ಲಲಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ ಕೆ ಸುಧಾಕರ್ ಸೋತು ರಕ್ಷಾ ರಾಮಯ್ಯ ಗೆಲಲ್ಲಿದ್ದಾರೆ. ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ನ ಮನ್ಸೂರ್ ಖಾನ್ ಅವರು ಗೆಲ್ಲಲಿದ್ದಾರೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಒಳಗೊಂಡಂತೆ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕನಿಷ್ಠ 3 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಗುರುರಾಜ್ ಅಂಜನ್ ಅಂದಾಜಿಸಿದ್ದಾರೆ.
ADVERTISEMENT