ಕ್ರಿಕೆಟ್​: ಬಾಂಗ್ಲಾ ಬಗ್ಗುಬಡಿದ ಅಫ್ಘಾನಿಸ್ತಾನ

ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಎದುರಾಳಿ ಬಾಂಗ್ಲಾದೇಶವನ್ನು 17 ಸೋಲಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಅಫ್ಘಾನಿಸ್ತಾನ 1-0 ಅಂತರದ ಮುನ್ನಡೆ ಸಾಧಿಸಿದೆ. 

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾದೇಶ 43 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 169 ರನ್​ ಗಳಿಸಿತು.

ಗುರಿ ಬೆನ್ನಟ್ಟಿದ್ದ ಅಫ್ಘಾನಿಸ್ತಾನ 21.4 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 83 ರನ್​ ಗಳಿಸಿತು. ಆದರೆ ಮಳೆಯ ಕಾರಣದಿಂದ ಡಕ್​ ವರ್ತ್​ ಲೂಯಿಸ್​ ನಿಯಮದ ಪ್ರಕಾರ ಅಫ್ಘಾನಿಸ್ತಾನ ಗೆದ್ದಿದೆ.

ಮಳೆಯ ಕಾರಣದಿಂದ ಎರಡೂ ತಂಡಗಳ ಆಟವನ್ನು 43 ಓವರ್​ಗಳಿಗೆ ಸೀಮಿತಗೊಳಿಸಲಾಗಿತ್ತು.

ಅಫ್ಘಾನಿಸ್ತಾನ ಫಾರೂಕಿ 24 ರನ್​ಗೆ 3 ವಿಕೆಟ್, ಮುಜೀಬ್​ ಉರ್​ ರೆಹಮಾನ್​ 21 ರನ್​​ಗೆ 2 ವಿಕೆಟ್​ ಮತ್ತು ರಶೀದ್​ ಖಾನ್​ 21 ರನ್​ಗೆ 2 ವಿಕೆಟ್​ ಗಳಿಸಿ ಬಾಂಗ್ಲಾ ದೇಶದ ಬೆನ್ನುಮೂಳೆ ಮುರಿದರು.

58 ಎಸೆತಗಳನ್ನು ಎದುರಿಸಿದ ಇಬ್ರಾಹಿಂ ಝರ್ದಾನ್​ 41 ರನ್​ ಗಳಿಸಿ ಅಫ್ಘಾನಿಸ್ತಾನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

LEAVE A REPLY

Please enter your comment!
Please enter your name here