ಉಡುಪಿ ಜಿಲ್ಲೆಯ 5 ಗ್ರಾಮಗಳಲ್ಲಿ ಅತ್ಯಧಿಕ ಮಳೆ

ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತೂ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ರಾಜ್ಯದಲ್ಲಿ ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಬೆಳಗ್ಗೆ 7 ಗಂಟೆಯವರೆಗೆ ಅತ್ಯಧಿಕ ಮಳೆಯಾಗಿದೆ.

ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ 

ಮಣಿಪುರ- 302 ಮಿಲಿ ಮೀಟರ್​, ಕಾಂತಾವರ- 301 ಮಿಲಿ ಮೀಟರ್​, ಮುದರಂಗಡಿ-295.5 ಮಿಲಿ ಮೀಟರ್​, ಅರ್ತಾಡಿ-279.5 ಮಿಲಿ ಮೀಟರ್​ ಮತ್ತು ವಡ್ಡರ್ಸೆ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ 279 ಮಿಲಿ ಮೀಟರ್​ನಷ್ಟು ಮಳೆಯಾಗಿದೆ.

ಇವತ್ತು ಮಳೆಯಬ್ಬರ:

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್​ ವ್ಯಾಪ್ತಿಗಳಲ್ಲಿ ರಾಜ್ಯದಲ್ಲಿ ಅತ್ಯಧಿಕ ಮಳೆ ಆಗಬಹುದು ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿದೆ.

ಆಲೂರು-240 ಮಿಲಿ ಮೀಟರ್​, ಚಿತ್ತೂರು – 223 ಮಿಲಿ ಮೀಟರ್​, ನಡ – 221 ಮಿಲಿ ಮೀಟರ್​, ಮರವಂತೆ – 221 ಮಿಲಿ ಮೀಟರ್​ ಮತ್ತು ಕಿರಿ ಮಂಜೇಶ್ವರದಲ್ಲಿ 208 ಮಿಲಿ ಮೀಟರ್​ ಮಳೆ ಆಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.

LEAVE A REPLY

Please enter your comment!
Please enter your name here