ಬಹುಕಾಲದಿಂದ ಚಿತ್ರರಂಗದಿಂದ ದೂರವಿದ್ದ ನಟಿ ಹಾಗೂ ರಾಜಕಾರಣಿ ರಮ್ಯಾ (Actress Ramya) ಗೌರಿ ಗಣೇಶ ಹಬ್ಬದಂದು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾಳೆ ಹನ್ನೊಂದು ಗಂಟೆಗೆ ಸಿಹಿ ಸುದ್ದಿ ಕೊಡುವೆ. ಈ ಸುದ್ದಿಯನ್ನು ಕೊಡಲು ನಾನು ಎಕ್ಸೈಟ್ ಆಗಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
ರಮ್ಯಾ (Actress Ramya) ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದೊಂದು ವರ್ಷದಿಂದ ಅವರು ಸಿನಿಮಾ ರಂಗಕ್ಕೆ ವಾಪಸ್ಸಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈಗದು ನಿಜವಾಗುವ ಕಾಲ ಬಂದಿದೆ. ಬಹುಶಃ ಅದೇ ಸುದ್ದಿಯನ್ನೇ ನಾಳೆ ಅಭಿಮಾನಿಗಳಿಗೆ ಕೊಡಲಿದ್ದಾರೆ ಎನ್ನುವುದು ಹಲವರ ಊಹೆ. ಅದು ನಿಜವೂ ಆಗಿರಬಹುದು. ಯಾಕೆಂದರೆ, ಅನೇಕ ದಿನಗಳಿಂದ ಅವರು ಸಿನಿಮಾ ಸಂಬಂಧಿ ನಾನಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
— Ramya/Divya Spandana (@divyaspandana) August 30, 2022
ಇದನ್ನೂ ಓದಿ : ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ ನಟಿ ರಮ್ಯಾ
ಮೂಲಗಳ ಪ್ರಕಾರ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ ಸಿನಿಮಾವನ್ನು ರಮ್ಯಾ ಅವರು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಇದೇ ಸಿನಿಮಾದಲ್ಲಿ ಅವರು ಪಾತ್ರವನ್ನೂ ಮಾಡಲಿದ್ದಾರಂತೆ. ಬಹುಶಃ ನಾಳೆ ಅದೇ ಸಿಹಿ ಸುದ್ದಿಯನ್ನು ಅವರು ಅಭಿಮಾನಿಗಳಿಗೆ ಕೊಡಬಹುದು ಎನ್ನಲಾಗುತ್ತಿದೆ. ಏನೇ ಆಗಲಿ ನಟಿ ಅಧಿಕೃತ ಸಿಹಿ ಸುದ್ದಿಗಾಗಿ ನಾಳೆ ರಮ್ಯಾ ಅವರು ನೀಡುವ ಮಾಹಿತಿಗಾಗಿ ಕಾಯಲೇಬೇಕು.
ಇದನ್ನೂ ಓದಿ : ನಟ ಚೇತನ್ ಬಂಧನ : ಚೇತನ್ ಬೆಂಬಲಕ್ಕೆ ನಿಂತ ನಟಿ ರಮ್ಯಾ