‘ಧಮಾಕ’ ಸಿನಿಮಾಗೆ ಅಭಿಷೇಕ್ ಅಂಬರೀಶ್ ಸಾಥ್ – ಗೆಳೆಯನಿಗೆ ಅಭಿಯ ಮೆಚ್ಚುಗೆ

Dhamaka Kannada Film

ಟ್ರೇಲರ್ ಹಾಗೂ ಹಾಡಿನ ಮೂಲಕ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಧಮಾಕ ಸಿನಿಮಾ (Dhamaka Kannada Film) ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಸೆಪ್ಟೆಂಬರ್ 2ರಂದು ಪ್ರೇಕ್ಷಕರಿಗೆ ಮನರಂಜನೆಯ ಕಚಗುಳಿ ಇಡಲು ಬರ್ತಿರುವ ಚಿತ್ರಕ್ಕೆ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಸಾಥ್ ಕೊಟ್ಟಿದ್ದಾರೆ. ಚಿತ್ರದ ನಾಯಕ ಶಿವರಾಜ್ ಕೆ ಆರ್ ಪೇಟೆ ಆಪ್ತ ಗೆಳೆಯರಾಗಿರುವ ಅಭಿಷೇಕ್ ಗೆಳೆಯನ ಹಾಗೂ ಸಿನಿಮಾ ಬಗ್ಗೆ ಪ್ರಶಂಸೆ ಮಾತುಗಳನ್ನಾಡಿದ್ದಾರೆ.

ಅಭಿಷೇಕ್ ಅಂಬರೀಶ್, ಶಿವರಾಜ್ ಕೆ ಆರ್ ಪೇಟೆ ಇಂಡಸ್ಟ್ರೀಯಲ್ಲಿ ಒಳ್ಳೆಯ ಮನುಷ್ಯ. ಶಿವಣ್ಣ ಶಿವಣ್ಣ ಅಂತಾ ನಾವು ಅವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತೇವೆ. ಅದೇ ಖುಷಿ ನೀವು ಸ್ಕ್ರೀನ್ ಮೇಲೆ ಬಂದಾಗಲೂ ಇರುತ್ತದೆ. ಶಿವಣ್ಣ ಒಂದೇ ಟ್ರ್ಯಾಕ್ ನಲ್ಲಿ ನಡೆಯೋಲ್ಲ. ವಿಭಿನ್ನ ಪಾತ್ರಗಳನ್ನು ಮಾಡ್ತಾ ಬೇರೆ ಬೇರೆ ಟ್ರ್ಯಾಕ್ ನಲ್ಲಿ ನಡೆಯುತ್ತಾರೆ. ಆರ್ಟಿಸ್ಟ್ ಆಗಿ ಸಕ್ಸಸ್ ಕಂಡವರು ಈಗ ಹೀರೋ ಆಗಿಯೂ ಸಕ್ಸಸ್ ಕಾಣ್ತಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಮಗ. ಧಮಾಕ (Dhamaka Kannada Film) ಟ್ರೇಲರ್ ನೋಡಿದೆ. ಫೂಟೇಜ್ ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ಇದನ್ನೂ ಓದಿ : ‘ಧಮಾಕ’ ಸಿನಿಮಾದಿಂದ ಬಂತು ಮತ್ತೊಂದು ಸಾಂಗ್ – ಮೂಲಿಮನಿ ಹಾಗೂ ಪ್ರಿಯಾ ಆಚಾರ್ ಭರ್ಜರಿ ಸ್ಟೆಪ್ಸ್

ನಾಯಕ ಶಿವರಾಜ್ ಕೆ.ಆರ್.ಪೇಟೆ , ಮಂಡ್ಯ ಅಂದ ತಕ್ಷಣ ನೆನಪಾಗುವುದು ಕಲಿಯುವ ಕರ್ಣ ಅಂಬರೀಶಣ್ಣ. ಅಷ್ಟೂ ಚಿಕ್ಕ ವಯಸ್ಸಾದ್ರೂ ಅಣ್ಣ ಅಂತಾ ಕರೆಯುತ್ತೇನೆ ಎಂದರೆ ಅವರಲ್ಲಿ‌ ನಾನು ಅಂಬರೀಶಣ್ಣ ನೋಡ್ತಾ ಇದ್ದೇನೆ. ತಂದೆಯಷ್ಟೇ ಎಲ್ಲರಿಗೂ ಪ್ರೀತಿ ಕೊಡುತ್ತಾರೆ. ನಮ್ಮ ಸಿನಿಮಾಗೆ ಬಂದು ಶುಭ ಹಾರೈಸಿದಕ್ಕೆ ಧನ್ಯವಾದ ಎಂದರು.

ಶಿವರಾಜ್ ಕೆ ಆರ್ ಪೇಟೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಇವರಿಗೆ ಜೊತೆಯಾಗಿ ನಯನಾ ನಟಿಸಿದ್ದಾರೆ. ಮೋಹನ್‌ ಜುನೇಜಾ, ಕೋಟೆ ಪ್ರಭಾಕರ್‌, ಮಿಮಿಕ್ರಿ ಗೋಪಾಲ್‌, ಅರುಣಾ ಬಾಲರಾಜ್‌ ಮುಂತಾದ ಕಲಾಬಳಗ ಚಿತ್ರದಲ್ಲಿದೆ. ಸಂಪೂರ್ಣ ಹಾಸ್ಯಮಯ ಕಥಾಹಂದರ ಹೊಂದಿರುವ ಧಮಾಕ ಚಿತ್ರವನ್ನು ಎಸ್‌ ಆರ್‌. ಮೀಡಿಯಾ ಪ್ರೊಡಕ್ಷನ್‌ ಬ್ಯಾನರ್‌ನಡಿ ಸುನೀಲ್‌.ಎಸ್‌.ರಾಜ್‌ ಮತ್ತು ಅನ್ನಪೂರ್ಣ ಪಾಟೀಲ್‌ ನಿರ್ಮಾಣ ಮಾಡಿದ್ದು, ಲಕ್ಷ್ಮೀ ರಮೇಶ್‌ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಹಾಲೇಶ್‌ ಎಸ್‌. ಛಾಯಾಗ್ರಹಣ, ವಿಕಾಸ್‌ ವಸಿಷ್ಠ ಸಂಗೀತ, ರಘು ಆರ್‌.ಕಜೆ ನೃತ್ಯ ನಿರ್ದೇಶನ ಮತ್ತು ವಿನಯ್‌ ಕೂರ್ಗ್‌ ಸಂಕಲನ ಸಿನಿಮಾಕ್ಕಿದೆ.

ಇದನ್ನೂ ಓದಿ : ಜೀವನ ತುಕಾಲಿ ಅಂದ್ರು ಶಿವರಾಜ್ ಕೆ.ಆರ್.ಪೇಟೆ.. ಇದು ‘ಧಮಾಕಾ’ ಸಾಂಗ್ ಝಲಕ್!

LEAVE A REPLY

Please enter your comment!
Please enter your name here