ನಟಿ ನಿತ್ಯಾ ಮೆನನ್ (Nithya Menen)ಮನೆಯಲ್ಲಿ ವಿಷಾದ ಮನೆ ಮಾಡಿದೆ. ನಿತ್ಯಾ ಮೆನನ್ ಅವರ ಅಜ್ಜಿ (Grand Mother) ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ನಿತ್ಯಾ ಮೆನನ್ ಸೋಷಿಯಲ್ ಮೀಡಿಯಾದಲ್ಲಿ ನೋವು ಹೊರಹಾಕಿದ್ದಾರೆ. ಇನ್ಸ್ಸ್ಟಾಗ್ರಾಂನಲ್ಲಿ ಭಾವೋದ್ವೇಗದ ಪೋಸ್ಟ್ ಹಾಕಿಕೊಂಡಿದ್ದಾರೆ.
ಒಂದು ಶಕೆ ಮುಗಿದಿದೆ. ನಿಮ್ಮನ್ನು ಯಾವಾಗಲು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇನೆ. ಗುಡ್ಬೈ ಅಜ್ಜಿ (GoodBye ammamma). ಮೈ ಚೆರ್ರಿಮ್ಯಾನ್ (My cherryman)(ತಾತ)ನನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ
ಎಂದು ನಿತ್ಯಾ ಮೆನನ್ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ನೋಡಿದವರೆಲ್ಲಾ ನಿತ್ಯಾಮೆನನ್ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಮೈನಾ, ಕೋಟಿಗೊಬ್ಬ ಸೇರಿ ಕನ್ನಡದ ಹಲವು ಚಿತ್ರಗಳಲ್ಲಿ ನಿತ್ಯಾ ಮೆನನ್ ನಟಿಸಿದ್ದಾರೆ.
ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿಯೂ ನಿತ್ಯಾ ಮೆನನ್ ನಟಿಸಿದ್ದಾರೆ.
ವೆಬ್ ಸೀರೀಸ್ಗಳಲ್ಲೂ ಬ್ಯುಸಿ ಆಗಿದ್ದಾರೆ.
ADVERTISEMENT
ADVERTISEMENT