ನಾಯಿ ದಾಳಿ: ನಟ ದರ್ಶನ್​ ವಿರುದ್ಧ ಕೇಸ್​ ದಾಖಲು

ನಟ, ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಟ ದರ್ಶನ್​ ಅವರ ಮನೆಯ ನಾಯಿಗಳು ದಾಳಿ ಮಾಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ದರ್ಶನ್​ ಅವರು ಎರಡನೇ ಆರೋಪಿಯಾಗಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್​ 289ರಡಿ (ಪ್ರಾಣಿಗಳ ವಿಷಯದಲ್ಲಿ ನಿರ್ಲಕ್ಷ್ಯತೆ ವಹಿಸಿದ ಆರೋಪ)  ಎಫ್​ಐಆರ್​ ದಾಖಲಾಗಿದೆ.

ಈ ಪ್ರಕರಣ ಸಾಬೀತಾದರೆ ಗರಿಷ್ಠ 6 ತಿಂಗಳು ಜೈಲು ಮತ್ತು 1 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.

ರಾಜರಾಜೇಶ್ವರಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಬಂದಿದ್ದ ವಕೀಲೆ ಅಮಿತಾ ಎಂಬವರು  ದರ್ಶನ್​ ಮನೆಯ ಎದುರಿನ ಪಕ್ಕದಲ್ಲಿ ಕಾರು ನಿಲ್ಲಿಸಿದ್ದರು.

ಈ ವೇಳೆ ದರ್ಶನ್​ ಅವರ ಮನೆಯ ಮೂರು ನಾಯಿಗಳು ದಾಳಿ ಮಾಡಿದ್ದವು. ಅಮಿತಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.

LEAVE A REPLY

Please enter your comment!
Please enter your name here