ರಾಜಸ್ಥಾನ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮತ್ತು ಯುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ತಮ್ಮ ಪತ್ನಿ ಸಾರಾ ಅಬ್ದುಲ್ಲಾ ಅವರಿಗೆ ವಿಚ್ಛೇಧನ ನೀಡಿದ್ದಾರೆ.
ಸಾರಾ ಅಬ್ದುಲ್ಲಾ ಅವರಿಗೆ ವಿಚ್ಛೇಧನ ನೀಡಿರುವ ಬಗ್ಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸಚಿನ್ ಪೈಲಟ್ ಘೋಷಿಸಿಕೊಂಡಿದ್ದಾರೆ.
2004ರಲ್ಲಿ ಪೈಲಟ್ ಅವರು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಅವರ ಪುತ್ರಿ ಸಾರಾ ಅಬ್ದುಲ್ಲ ಅವರನ್ನು ಮದುವೆ ಆಗಿದ್ದರು. ಇವರಿಗೆ ಅರಾನ್ ಮತ್ತು ವಿಹಾನ್ ಎಂಬ ಹೆಸರಿನ ಇಬ್ಬರು ಮಕ್ಕಳಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಪತಿ ಅಥವಾ ಪತ್ನಿ ಬಗ್ಗೆ ತಿಳಿಸಬೇಕಿರುವ ಕಲಂನಲ್ಲಿ 46 ವರ್ಷದ ಸಚಿನ್ ಪೈಲಟ್ ಅವರು ವಿಚ್ಛೇಧಿತ ಎಂದು ಮಾಹಿತಿ ನೀಡಿದ್ದಾರೆ,
ಈ ಮೂಲಕ ಇದೇ ಮೊದಲ ಬಾರಿಗೆ ವಿಚ್ಛೇಧನದ ಬಗ್ಗೆ ಸಚಿನ್ ಪೈಲಟ್ ಘೋಷಿಸಿಕೊಂಡಿದ್ದಾರೆ.
ADVERTISEMENT
ADVERTISEMENT