ಅರಕಲಗೂಡಿನಿಂದ ಎ ಮಂಜುಗೆ ಜೆಡಿಎಸ್​ ಟಿಕೆಟ್​, ಅರಸೀಕೆರೆಯಲ್ಲಿ ಶಿವಲಿಂಗೇಗೌಡಗೆ ಟಿಕೆಟ್​ ಇಲ್ಲ – ಕುಮಾರಸ್ವಾಮಿ ಘೋಷಣೆ​

ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎ ಮಂಜು ಅವರಿಗೆ ಜೆಡಿಎಸ್​ ಟಿಕೆಟ್​ ಘೋಷಣೆ ಆಗಿದೆ.
ಎ ಮಂಜು ಅವರ ಜೊತೆಗೆ ಮಾತಾಡಿದ್ದೇನೆ. ಅವರು ನಮ್ಮ ಪಕ್ಷಕ್ಕೆ ಬರ್ತಾರೆ. ಅವರಿಗೆ ನಾವು ಟಿಕೆಟ್​ ಫೈನಲ್​ ಮಾಡ್ತೀವಿ
ಎಂದು ಬೆಂಗಳೂರಲ್ಲಿರುವ ಜೆಡಿಎಸ್​ ಪಕ್ಷದ ಮುಖ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅರಸೀಕೆರೆಯಿಂದ ಬೇರೆ ಅಭ್ಯರ್ಥಿಗಳಿದ್ದಾರೆ:
ಅರಸೀಕೆರೆಯಲ್ಲಿ ಈ ಬಾರಿ ಹಾಲಿ ಶಾಸಕ ಶಿವಲಿಂಗೇಗೌಡರಿಗೆ ಟಿಕೆಟ್​ ಸಿಗಲ್ಲ ಎಂಬ ಸುಳಿವು ನೀಡಿದ್ದಾರೆ ಮಾಜಿ ಸಿಎಂ ಹೆಚ್​ಡಿಕೆ.
ಎರಡು ವರ್ಷಗಳಿಂದ ಶಿವಲಿಂಗೇಗೌಡ ಅವರು ಪಕ್ಷದ ಸಭೆಗೆ ಬಂದಿಲ್ಲ. ಅಲ್ಲೂ ಕೂಡಾ ನಮಗೆ ಅಭ್ಯರ್ಥಿಗಳಿದ್ದಾರೆ. ಅರಸೀಕೆರೆಯಲ್ಲಿ ನಮಗೆ ಅಭ್ಯರ್ಥಿಗಳ ಕೊರತೆ ಇಲ್ಲ 
ಎಂದು ಮಾಜಿ ಸಿಎಂ ಹೆಚ್​ಡಿಕೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here