BIG BREAKING: 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್​ ಪರೀಕ್ಷೆ ಇಲ್ಲ – ಹೈಕೋರ್ಟ್​ ತೀರ್ಪು

ಮಹತ್ವದ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್​​ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷ ವಿಶೇಷ ಪಬ್ಲಿಕ್​ ಪರೀಕ್ಷೆಯನ್ನು ನಡೆಸುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ವಜಾಗೊಳಿಸಿದೆ.

ಅಂದರೆ ಈ ವರ್ಷ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಪಬ್ಲಿಕ್​ ಪರೀಕ್ಷೆ ಇರಲ್ಲ.

ರಾಜ್ಯ ಪಠ್ಯದ ವಿದ್ಯಾರ್ಥಿಗಳಿಗೆ 5ನೇ ಮತ್ತು 8ನೇ ತರಗತಿಯಲ್ಲಿ ಪಬ್ಲಿಕ್​ ಪರೀಕ್ಷೆ ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಸುತ್ತೋಲೆ ಹೊರಡಿಸಿತ್ತು. ಆ ಸುತ್ತೋಲೆಯನ್ನು ಹೈಕೋರ್ಟ್​ ವಜಾಗೊಳಿಸಿದೆ.

ಮಾರ್ಚ್​ 13ರಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭ ಆಗ್ಬೇಕಿತ್ತು.

LEAVE A REPLY

Please enter your comment!
Please enter your name here