ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕ್ವಾರಿಯೊಂದರಲ್ಲಿ 4 ಜನ ಸಿಲುಕಿದ್ದಾರೆ. ಈ ವರೆಗೆ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಅರೆ.
ಮುನೀರ್ ಪಲ್ಲಂ ಪ್ರದೇಶದಲ್ಲಿನ ಕಲ್ಲುಗಣಿಯಲ್ಲಿನ ಬಂಡೆಯೊಂದರ ಮೇಲಿನಿಂದ ಬಂಡೆಗಳು ಉರುಳಿ ಬಿದ್ದು ಕಾರ್ಮಿಕರು ಸುಮಾರು 300 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರ.
“ಆರಂಭದಲ್ಲಿ ಆರು ಕಾರ್ಮಿಕರು ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಅಧಿಕಾರಿಗಳು ಇಬ್ಬರನ್ನು ರಕ್ಷಿಸಿದ್ದಾರೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಅಧಿಕಾರಿಗಳು ಈ ಸ್ಥಳಕ್ಕೆ ಹೋಗುತ್ತಿದ್ದಾರೆ” ಎಂದು ದಕ್ಷಿಣ ರೇಂಜ್ನ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಸ್ರಾ ಗಾರ್ಗ್ ಅವರು ಮಾಧ್ಯಮಕ್ಕೆ ತಿಳಿಸಿದರು.
ಇಂದು ಬೆಳಗ್ಗೆ ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಕೂಡ ತರಲಾಗಿತ್ತು.
ರಕ್ಷಣಾ ತಂಡವು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದ ಶ್ರೀ ಗಾರ್ಗ್, “ಕ್ವಾರಿಯ ರಚನೆಯು ಸಿಕ್ಕಿಬಿದ್ದಿರುವ ಎಲ್ಲರನ್ನೂ ರಕ್ಷಿಸಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. 4 ಜನರನ್ನು ಹೊರತುಪಡಿಸಿ ಇನ್ನೂ ಹೆಚ್ಚಿನ ಜನರ ಈ ಕ್ವಾರಿಯಲ್ಲಿ ಸಿಲುಕಿದ್ದಾರೆಯೇ ಎನ್ನುವ ಬಗ್ಗೆ ಖಚಿತತೆ ಇಲ್ಲ ಎಂದು ಹೇಳಿದ್ದಾರೆ.