ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರ್ತಾರೆ ಎಂದು ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ರತ್ನರಾಜ್​ ಜೈನ್​ ಇನ್ನಿಲ್ಲ

ಸಿದ್ದರಾಮಯ್ಯನವರು ಐದು ವರ್ಷ ಅಧಿಕಾರ ಪೂರೈಸುತ್ತಾರೆ ಎಂದು ಆಗಸ್ಟ್​ 2013ರಲ್ಲಿ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ರತ್ನರಾಜ್​ ಇನ್ನಿಲ್ಲ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರತ್ನರಾಜ್​ ಜೈನ್​ ಅವರು ಇವತ್ತು ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ರತ್ನರಾಜ್​ ಜೈನ್​ ಅವರು ಬೆಂಗಳೂರಲ್ಲಿ ವಾಸವಾಗಿದ್ದರು. ಇವರು ಮೂಡಬಿದ್ರೆ ಜೈನ್​ ಹೈಸ್ಕೂಲ್​ನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದರು.
ಇಂಡಿಯನ್​ ಆಸ್ಟ್ರಾಲಜಿ ಎಂಬ ಮ್ಯಾಗಜಿನ್​ಗೆ ಆಗಸ್ಟ್​ 2013ರಲ್ಲಿ ಬರೆದಿದ್ದ ಲೇಖನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಪೂರ್ಣಾವಧಿ ಪೂರೈಸಲಿದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯನ್ನು ಪೂರೈಸುವ ಮೂಲಕ ದೇವರಾಜ್ ಅರಸು ಬಳಿಕ ಪೂರ್ಣಾವಧಿ ಸಿಎಂ ಆದ ಮೊದಲ ಮುಖ್ಯಮಂತ್ರಿ ಎಂದು ಎನಿಸಿಕೊಂಡರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅವರು ಅವಧಿ ಪೂರ್ಣಗೊಳಿಸಲ್ಲ ಎಂದು ಟಿವಿ ಚಾನೆಲ್​ಗಳಲ್ಲಿ ಜ್ಯೋತಿಷಿಗಳೆಲ್ಲರೂ ಚರ್ಚೆ ಮಾಡುತ್ತಿದ್ದಾಗ ಸಿದ್ದರಾಮಯ್ಯ ಅವರು ಸಿಎಂ ಆದ ಆರಂಭದಲ್ಲೇ ರತ್ನರಾಜ್​ ಜೈನ್​ ಅವರು ನುಡಿದ ಭವಿಷ್ಯ ನಿಜ ಆಗಿತ್ತು.