BIG BREAKING: ಗುಜರಾತ್​ಗೆ ಚುನಾವಣೆ ಘೋಷಿಸದ ಚುನಾವಣಾ ಆಯೋಗ, ಹಿಮಾಚಲ ಪ್ರದೇಶಕ್ಕಷ್ಟೇ ಚುನಾವಣೆ ಪ್ರಕಟ

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಆದ್ರೆ ಗುಜರಾತ್​ ವಿಧಾನಸಭಾ ಚುನಾವಣೆ ಘೋಷಣೆ ಮಾಡಿಲ್ಲ.
ಕೇವಲ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯನ್ನೂ ಘೋಷಿಸಿದೆ. 2017ರಲ್ಲಿ ಏಕಕಾಲಕ್ಕೆ ಗುಜರಾತ್​ ಮತ್ತು ಹಿಮಾಚಲ ಪ್ರದೇಶಕ್ಕೆ ಚುನಾವಣೆ ಘೋಷಣೆ ಮಾಡಲಾಗಿತ್ತು.
ಗುಜರಾತ್​ ವಿಧಾನಸಭೆಯ ಅವಧಿ ಫೆಬ್ರವರಿ 18, 2023ರಂದು ಮುಗಿಯಲಿದೆ. ಹಿಮಾಚಲ ಪ್ರದೇಶ ವಿಧಾನಸಭೆಯ ಅವಧಿ ಜನವರಿ 8ರಂದು ಮುಗಿಯಲಿದೆ.
ಹಿಮಾಚಲಪ್ರದೇಶ ಮತ್ತು ಗುಜರಾತ್​ ವಿಧಾನಸಭಾ ಅವಧಿ ಮುಗಿಯುವುದರ ನಡುವೆ ಒಂದು ತಿಂಗಳ ಅಂತರ ಇರುವ ಹಿನ್ನೆಲೆಯಲ್ಲಿ ಗುಜರಾತ್​ನಲ್ಲಿ ಮುಂದಿನ ತಿಂಗಳಷ್ಟೇ ಚುನಾವಣೆ ಘೋಷಣೆ ಆಗಬಹುದು.
ಎರಡೂ ರಾಜ್ಯಗಳ ವಿಧಾನಸಭಾ ಅವಧಿ ಮುಗಿಯಲು 1 ತಿಂಗಳ ಅಂತರ ಇರುವ ಕಾರಣ ಗುಜರಾತ್​ನಲ್ಲಿ ಅನಗತ್ಯವಾಗಿ ಅಧಿಕ ದಿನ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಹಿಮಾಚಲ ಪ್ರದೇಶ ಚುನಾವಣೆ ಮುಹೂರ್ತ:
ಸೂಚನೆ ಪ್ರಕಟ: ಅಕ್ಟೋಬರ್​ 17
ನಾಮಪತ್ರ ಸಲ್ಲಿಕೆ ಆರಂಭ: ಅಕ್ಟೋಬರ್​ 25
ಮತದಾನ: ನವೆಂಬರ್​ 12
ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟ: ಡಿಸೆಂಬರ್​ 08