ನಾಮಕರಣ ಕಾರ್ಯಕ್ರಮದಲ್ಲಿ ರಾರಾಜಿಸಿದ ತುಳು ಲಿಪಿ…!

ಕಾರ್ಕಳದ ನ್ಯಾಯವಾದಿ ದಂಪತಿಗಳಾದ M K ವಿಪುಲ್ ತೇಜ್ ಮತ್ತು ಶ್ವೇತ ದಂಪತಿಗಳ ಪ್ರಥಮ ಪುತ್ರಿಯ ನಾಮಕರಣ ಸಮಾರಂಭದಲ್ಲಿ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯ ಲಿಪಿಯಲ್ಲಿ ಮಗುವಿನ ಹೆಸರು ಅನಾವರಣಗೊಳಿಸಲಾಯಿತು.

ವಿಶೇಷವೆಂದರೆ ಅಕ್ಕಿಯಲ್ಲಿ ಮಗುವಿನ ಹೆಸರನ್ನು ತುಳು ಲಿಪಿಯಲ್ಲಿ ಬರೆಯುವ ಮುಖಾಂತರ ಮತ್ತು LED screen ನಲ್ಲಿ ತುಳು ಲಿಪಿಯಲ್ಲಿ ಮಗುವಿನ ಹೆಸರು ಬಿತ್ತರವಾಯಿತು.

ಆಗಮಿಸಿದ್ದ ಅತಿಥಿಗಳಿಗೆ ಉಡುಗೊರೆಯೊಂದಿಗೆ ತುಳು ಲಿಪಿಯ ಪ್ರಚಾರಕ್ಕಾಗಿ ಪ್ರತೀಯೋರ್ವರಿಗೂ ತುಳು ಲಿಪಿಯಲ್ಲಿ ಬರೆದ ಮಗುವಿನ ಹೆಸರಿನ ಸ್ವೀಟ್ ಬಾಕ್ಸ್ ಜೊತೆಗೆ ತುಳು ಲಿಪಿಯ ಅಕ್ಷರಮಾಲೆ ಯನ್ನು ನೀಡಲಾಯಿತು.

ಇದೊಂದು ಮಾದರಿ ಕಾರ್ಯವಾಗಿದ್ದು ಪ್ರತಿಯೋರ್ವರು ತುಳು ಲಿಪಿ ಅಧ್ಯಯನ ನಡೆಸುವಂತೆ ಪ್ರೇರೇಪಿಸಿದ ಕಾರ್ಕಳ ವಕೀಲ ದಂಪತಿಗಳನ್ನು ಮಂಜುನಾಥೇಶ್ವರ ತುಳು ಅಧ್ಯಯನ ಪೀಠ ಮತ್ತು ವಿಶ್ವ ವಿದ್ಯಾಲಯ ಮಂಗಳೂರು ಇಲ್ಲಿನ ಸದಸ್ಯರಾದ ಮೋಹನ್ ಪಡಿವಾಳ್ ಅಭಿನಂದಿಸಿದರು.

ಎಲ್ಲಾ ಯುವಜನತೆ ಮತ್ತು ಮುಂದಿನ ಪೀಳಿಗೆ ತುಳು ಲಿಪಿಯನ್ನು ಅದ್ಯಯನ ಮಾಡಬೇಕು ತನ್ನ ಮಗಳಿಗೂ ತುಳು ಲಿಪಿಯನ್ನು ಕಲಿಸುತ್ತೇನೆಂದು ಈ ಸಂಧರ್ಭದಲ್ಲಿ ವಿಪುಲ್ ಎಂ ಕೆ ಹೇಳಿದರು.