ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಾಷ್ ಟೆಕ್ನಿಕಲ್ ಲ್ಯಾಬ್ ಸಹಕಾರಿ – ಉಪ ಕಾರ್ಮಿಕ ಆಯುಕ್ತ ಗುರುಪ್ರಸಾದ್ ಎಚ್ ಎಲ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘Bosch Automotive Electronics India Pvt. Ltd’ ಪ್ರಾಯೋಜಕತ್ವದಲ್ಲಿ ‘Bosch Technical Lab’ ಅಭಿವೃದ್ಧಿಗೊಂಡಿದ್ದು ಇದರ ಉದ್ಘಾಟನೆಯನ್ನು ಬೆಂಗಳೂರಿನ ಉಪ ಕಾರ್ಮಿಕ ಆಯುಕ್ತರಾದ ಶ್ರೀ ಗುರುಪ್ರಸಾದ್ ಎಚ್ ಎಲ್ ನೆರವೇರಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಬಾಷ್ ಟೆಕ್ನಿಕಲ್ ಲ್ಯಾಬ್ ಸಹಕಾರಿಯಾಗಲಿದೆ ಎಂದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ Bosch automative electronics India private limited ನ ಉಪಾಧ್ಯಕ್ಷ ಶ್ರೀ ಕುಮಾರ್ ಎಸ್ ಭಾಗವಹಿಸಿ ಮುಂದೆ ಈ ಲ್ಯಾಬ್ ಜೊತೆ Bosch ತಂಡ ಕೂಡ ವಿದ್ಯಾರ್ಥಿಗಳಿಗೆ ಸಹಕಾರ ನೀಡಲಿದೆ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ Bosch ಸಂಸ್ಥೆಯ ಶ್ರೀ ರಾಘವೇಂದ್ರ ಪಾಟೀಲ್, ಶ್ರೀ ಜಾನ್ ಸಿಲ್ವೆಸ್ಟರ್ , ಶ್ರೀ ವಿಕ್ರಮ್ ಹಾಜರಿದ್ದು ಈ ಲ್ಯಾಬ್ ಸಾಗಿ ಬಂದ ವಿಧಾನಗಳನ್ನು ಮತ್ತು ತಮ್ಮ ಕೊಡುಗೆಗಳನ್ನು ಸ್ಮರಿಸಿಕೊಂಡರು.ಇವರ ಜೊತೆ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಪರವಾಗಿ ಕಾರ್ಯದರ್ಶಿಗಳಾದ ಶ್ರೀ ಸತೀಶ್ಚಂದ್ರ ಎಸ್ ಭಾಗವಹಿಸಿ ವಿದ್ಯಾರ್ಥಿಗಳು ಈ ಲ್ಯಾಬ್ ನ ಸಂಪೂರ್ಣ ಲಾಭ ಪಡೆದು ಉತ್ತಮ ಭವಿಷ್ಯ ರೂಪಿಸಲು ಕರೆಕೊಟ್ಟರು.

ಇವರ ಜೊತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ CEO ಆಗಿರುವ ಶ್ರೀ ಪೂರನ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂತೋಷ್ ಉಪಸ್ಥಿತರಿದ್ದರು ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥರಾದ ಶ್ರೀ ಅಮರೇಶ್ ಹೆಬ್ಬಾರ್ ಕಾರ್ಯಕ್ರಮಕ್ಕೆ ಆಗಮಿಸಿರುವ ಸರ್ವರನ್ನು ಸ್ವಾಗತಿಸಿ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮೇರಿ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ಶ್ರೀ ಸಂಪತ್ ಕುಮಾರ್ ನಿರೂಪಿಸಿದರು.