ಕಾಂತಾರ ವಿವಾದ; ನಟ ಚೇತನ್ ಗೆ ಟಾಂಗ್ ಕೊಟ್ಟ ಉಪ್ಪಿದಾದಾ

ಬೆಂಗಳೂರು: ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಪೋಸ್ಟ್ ವಿಚಾರದ ಬಗ್ಗೆ ಬೆಂಗಳೂರಲ್ಲಿ ನಟ ಚೇತನ್ ಮಾತನಾಡಿ ಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.

ನಟ ಚೇತನ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಇದೀಗ ಈ ಕುರಿತು ನಟ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಉಪೇಂದ್ರ ಆಚರಣೆಗಳ ನಂಬಿಕೆ ವಿಚಾರದಲ್ಲಿ ಯಾರೂ ಮಾತನಾಡಬಾರದು, ಇಂತಹ ವಿಚಾರಗಳನ್ನು ಇಗ್ನೋರ್ ಮಾಡಬೇಕು, ಇಂತಹ ವಿಚಾರಗಳು ಮಾತನಾಡಿದದಷ್ಟು ಬೆಳೆಯುತ್ತದೆ. ಇವತ್ತಿಗೂ ನಮಗೆ ದೈವದ ಬಗ್ಗೆ ನಂಬಿಕೆಯಿದೆ. ನಮ್ಮ ಮನೆಯಲ್ಲಿ ಇವತ್ತಿಗೂ ನಾಗರಪೂಜೆ ಮಾಡುತ್ತಾರೆ, ಆಚರಣೆಗಳ ನಂಬಿಕೆ ವಿಚಾರವನ್ನು ಯಾರೂ ಪ್ರಶ್ನೆ ಮಾಡಬಾರದು ಎಂದು ನಟ ಚೇತನ್ ಗೆ ಟಾಂಗ್ ನೀಡಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಕಾಂತಾರ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹೊಸ ವಿವಾದದ ಸೃಷ್ಠಿಯಾಗಿದೆ.

ಕರಾವಳಿ ಭೂತಾರಾಧನೆ ಬಗ್ಗೆ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ವಿವಾದ ಹುಟ್ಟಿಸಿದ್ದಾರೆ ಕರಾವಳಿ ಭಾಗದ ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ವಾʼ? ಎಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿರೋ ಕಾಂತಾರಾ ಗೆ ನಟ ಚೇತನ್ ಕಿಡಿ ಕಾರಿದ್ದಾರೆ.

ಭೂತಕೋಲ ಹಿಂದೂ ಸಂಸ್ಕೃತಿ ಎಂದು ರಿಷಬ್ ಶೆಟ್ಟಿ ಹೇಳಿಕೆಯನ್ನು ನಟ ಚೇತನ್ ಅಲ್ಲಗೆಳೆದಿದ್ದಾರೆ. ಈ ಬಗ್ಗೆ ನೆಟ್ಟಿಗರು ನಟ ಚೇತನ್ ಪ್ರಚಾರಕ್ಕಾಗಿ ಈ ವಿವಾದವನ್ನು ಎತ್ತಿದ್ದಾರೆ. ಎಲ್ಲೆಡೆ ಕಿಡಿಕಾರಿದ್ದಾರೆ., ಈ ಬಗ್ಗೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಕುರಿತು ಮಾಧ್ಯಮಗಳೊಂದಿಗೆ ನಟ ಚೇತನ್ ಸ್ಪಷ್ಟನೆ ನೀಡುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಕಾಂತಾರ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹೊಸ ವಿವಾದದ ಸೃಷ್ಠಿಯಾಗಿದೆ.

LEAVE A REPLY

Please enter your comment!
Please enter your name here