ಕಾರವಾರ ವಿಧಾನಸಭಾ ಕ್ಷೇತ್ರ: Karwar Assembly Constituency
ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ವಿಧಾನಸಭಾ ಕ್ಷೇತ್ರ. ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಕೂಡಾ ಹೌದು.
2018ರ ಫಲಿತಾಂಶ: 2018 Karwar Assembly Result
ಬಿಜೆಪಿ ಅಭ್ಯರ್ಥಿ ಆಗಿದ್ದ ರೂಪಾಲಿ ನಾಯ್ಕ್ (Roopali Santosh Naik) ಅವರು 60,339 (ಶೇಕಡಾ 38.3) ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಿದ್ದರು.
ಜೆಡಿಎಸ್ನಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ (Anand Vasant Asnotikar) 46,275 (ಶೇಕಡಾ 29.3) ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಕೃಷ್ಣ ಸೈಲ್ (Santeesh Sail Krishna) 45,071 (ಶೇಕಡಾ 28.6) ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಎರಡನೇ ಸ್ಥಾನದಲ್ಲಿದ್ದ ಆನಂದ್ ಅಸ್ನೋಟಿಕ್ ಮತ್ತು ಸತೀಶ್ ಸೈಲ್ ನಡುವಿನ ಮತಗಳ ಅಂತರ ಕೇವಲ 1,204.
2018ರಲ್ಲಿ ಚಲಾವಣೆ ಆದ ಮತಗಳು:
ಒಟ್ಟು ಮತದಾರರು: 2,16,020. ಚಲಾವಣೆ ಆದ ಮತಗಳು: 1,57,739 (74.1%). ನೋಟಾ ಮತಗಳ ಸಂಖ್ಯೆ: 2,359 (1.1%). ಈ ಕ್ಷೇತ್ರ ಮಹಿಳಾ ಮತದಾರರ ಸಂಖ್ಯೆ ಸಾವಿರದಷ್ಟು ಹೆಚ್ಚಿದೆ.
ಮೂರು ಬಾರಿ ಎರಡು ಪಕ್ಷಗಳ ಗೆಲುವು:
2008ರಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಗೆದ್ದಿದ್ದ ಆನಂದ್ ಅಸ್ನೋಟಿಕ್ ಆಗ ಮುಖ್ಯಮಂತ್ರಿ ಆದ ಯಡಿಯೂರಪ್ಪ ನಡೆಸಿದ್ದ ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರಿದ್ದರು. 2013ರಲ್ಲಿ ಬಿಜೆಪಿಯಲ್ಲಿ ಸ್ಪರ್ಧಿಸಿ ಸೋತ ಆನಂದ್ ಅಸ್ನೋಟಿಕರ್ ಆ ಬಳಿಕ ಜೆಡಿಎಸ್ಗೆ ಸೇರಿದರು.
2013ರಲ್ಲಿ ಅಸ್ನೋಟಿಕ್ ವಿರುದ್ಧ 36 ಸಾವಿರ ಮತಗಳ ಅಂತರದಿಂದ ಪ್ರಚಂಡ ಜಯಗಳಿಸಿ ಶಾಸಕರಾಗಿದ್ದ ಕಾಂಗ್ರೆಸ್ನ ಸತೀಶ್ ಸೈಲ್ 2018ರಲ್ಲಿ ಸೋತರು.
ಜಾತಿ ಲೆಕ್ಕಾಚಾರ:
ಒಟ್ಟು ಮತದಾರರ ಪೈಕಿ ಎಸ್ಸಿ ಮತದಾರರು: ಶೇಕಡಾ 6, ಎಸ್ಸಿ ಮತದಾರರು: ಶೇಕಡಾ 0.91
ಯಾರು ಟಿಕೆಟ್ ಆಕಾಂಕ್ಷಿಗಳು:
ಬಿಜೆಪಿಯಿಂದ ಹಾಲಿ ಶಾಸಕಿ ರೂಪಾಲಿ ನಾಯ್ಕ್ ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡಬಹುದು. ಈ ಕ್ಷೇತ್ರದ ಮಾಜಿ ಶಾಸಕ ಗಂಗಾಧರ್ ಭಟ್ ಮತ್ತು ಬಿಜೆಪಿ ನಾಯಕ ನಾಗರಾಜ್ ನಾಯಕ್, ಉದ್ಯಮಿಗಳಾದ ರಾಜೇಂದ್ರ ನಾಯ್ಕ್ ಮತ್ತು ಭಾಸ್ಕರ್ ನಾರ್ವೆಕರ್ ಕೂಡಾ ಟಿಕೆಟ್ ಆಕಾಂಕ್ಷಿಗಳು.