ಕನಾ೯ಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತು ಶ್ರೀ ದಿಗಂಬರ ಜೈನ ಮಠ ಶ್ರೀ ಕ್ಷೇತ್ರ ಶ್ರವಣಬೆಳಗೊಳ ಸಹಯೋಗದಲ್ಲಿ ಆಯೋಜಿಸಿದ ಕ್ಷೇತ್ರಕಾರ್ಯಾವಲಂಬಿತ ಕಾರ್ಯಾಗಾರವು ದಿನಾಂಕ:10-12-2022 ರಂದು ಶ್ರವಣಬೆಳಗೊಳದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಪುಣೆಯ ಇನ್ಫೋಸಿಸ್ ಫೌಂಡೇಶನ್ ಭಾರತೀಯ ಶಾಸ್ತ್ರ ಪೀಠ, ಭಂಡಾರಕರ ಓರಿಯಂಟಲ್ ಸಂಶೋಧನ ಕೇಂದ್ರದ ವಿದ್ವಾಂಸರಾದ ಡಾ.ಶ್ರೀನಿವಾಸ ಪಾಡಿಗಾರ ಅವರು ಶ್ರವಣಬೆಳಗೊಳದ ಕನಜಿ ಸ್ವಾಮಿ ಯಾತ್ರಿನಿವಾಸದಲ್ಲಿ ಜೈನ ಗೆಜೆಟಿಯರ್ ಯೋಜನೆಯ ಸಂಶೋಧಕರಿಗೆ ಆಯೋಜಿಸಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತ ಪುರಾತತ್ವ ಮತ್ತು ಶಿಲ್ಪಗಳ ದಾಖಲೀಕರಣದಲ್ಲಿ ಪಾಶ್ಚಾತ್ಯರ ಕೊಡುಗೆ ಅಪಾರವಾಗಿದೆ. ಆದರೆ ಪರಿಪೂರ್ಣವಾಗಿ ಇಲ್ಲ, ಅದಕ್ಕೆ ಕಾರಣ ಅವರು ನಮ್ಮ ಸಂಸ್ಕ್ರತಿಯನ್ನು ಬಲ್ಲವಾರಗಿರದೆ ಮೂರನೆಯವರಾಗಿ ಬರೆದಿದ್ದಾರೆ ಎಂದು ತಿಳಿಸಿದರು. ಸಂಪೂರ್ಣ ಭಾತರದ ಪುರಾತತ್ತ್ವ ಮತ್ತು ಸಾಹಿತ್ಯದ ಕುರಿತಾಗಿ ತಿಳಿದುಕೊಂಡಾಗ ಮಾತ್ರ ಪರಿಪೂರ್ಣವಾಗುತ್ತದೆ ಎಂದು ತಿಳಿಸಿದರು.
ಅತಿಥಿಯಾಗಿ ಆಗಮಿಸಿದ್ದ ಗೊಮ್ಮಟವಾಣಿ ಸಂಪಾದಕ ಅಶೋಕಕುಮಾರ ಮಾತನಾಡುತ್ತ ಶ್ರವಣಬೆಳಗೊಳ ಸಂಶೋಧಕರಿಗೆ ಅನೇಕ ವಿಷಯಗಳನ್ನು ತೆರೆದಿಟ್ಟು ಕರೆಯುತ್ತಿದೆ ಆದರೆ ಇಲ್ಲಿಯವರೆಗೆ ಕೇವಲ ಮೂರು ಜನ ಮಾತ್ರ ಪಿಎಚ್.ಡಿ ಸಂಶೋಧನಾ ಕಾರ್ಯ ಮಾಡಿದ್ದಾರೆ. ಇನ್ನೂ ಹೆಚ್ಚು ಹೆಚ್ಚು ಸಂಶೋಧನಾ ಕೃತಿಗಳು ಹೊರಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಅಜಿತ ಮುರಗುಂಡೆ ಜೈನ ಗೆಜೆಟಿಯರ್ ಯೋಜನೆಯ ರೂಪರೇಷ ಹಾಗೂ ಬೆಳವಣಿಗೆಯ ಬಗೆಗೆ ಮಾತನಾಡಿದರು. ಕಾರ್ಯದರ್ಶಿ ಡಾ.ಅಪ್ಪಣ್ಣ ಹಂಜೆ ಸ್ವಾಗತಿಸಿದರು, ಸ್ಥಳಿಯ ಅಂಬಿಕಾ ಪ್ರೌಢಶಾಲೆಯ ಮಕ್ಕಳು ಪ್ರಾರ್ಥನೆ ಹೇಳಿದರು , ಜಂಟಿ ಕಾರ್ಯದರ್ಶಿ ಅನಿಲಕುಮಾರ ಇರಾಜ ವಂದನೆ ಸಲ್ಲಿಸಿದರು. ಶ್ರೀ ವೀರೇಂದ್ರ ಬೇಗೂರ ಅವರು ಕಾಯ೯ಕ್ರಮ ನಿರೂಪಿಸಿದರು.
-ಅನಿಲ ಇರಾಜ.