40 ವರ್ಷ ವಾರದಲ್ಲಿ 70 ಗಂಟೆ ಕೆಲಸ ಮಾಡಿದ್ದು ವ್ಯರ್ಥವಾಗಲಿಲ್ಲ ಎನ್ನುವ ಮೂಲಕ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ಕೆಲಸದ ಸಮಯದ ಕುರಿತ ತಮ್ಮ ಈ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾನು ಪ್ರತಿದಿನ ಬೆಳಗ್ಗೆ 6.30ಕ್ಕೆ ಆಫೀಸ್‌ನಲ್ಲಿರುತ್ತಿದ್ದೆ ಮತ್ತು ರಾತ್ರಿ 8.30ಕ್ಕೆ ಆಫೀಸ್ ಬಿಡುತ್ತಿದ್ದೆ ಮತ್ತು ವಾರದಲ್ಲಿ ಆರು ದಿನ ಕೆಲಸ ಮಾಡುತ್ತಿದ್ದೆʼ
ಎಂದು ಪ್ರಮುಖ ವಾಣಿಜ್ಯ ದೈನಿಕ ಎಕಾನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ನಾರಾಯಣಮೂರ್ತಿ ಅವರು ಹೇಳಿದ್ದಾರೆ.
ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಈ ಹಿಂದೆ ನಾರಾಯಣಮೂರ್ತಿ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು.
ಬಡತನದಿಂದ ಹೊರಬೇಕಾದರೆ ಕಷ್ಟಪಟ್ಟು ಕೆಲಸ ಮಾಡುವುದೊಂದೇ ಏಕೈಕ ದಾರಿ ಎಂದು ನನ್ನ ಹೆತ್ತವರು ನನಗೆ ಬಾಲ್ಯದಲ್ಲೇ ಹೇಳಿದ್ದರು. ಅದನ್ನು ಭಾವಿಸಿಕೊಂಡು ಪ್ರತಿ ಗಂಟೆಯ ಕೆಲಸದಿಂದ ಒಳ್ಳೆಯ ಉತ್ಪಾದಕತೆಯನ್ನು ಪಡೆಯಬಹುದು
ಎಂದು ನಾರಾಯಣಮೂರ್ತಿ ಅವರು ಹೇಳಿದ್ದಾರೆ.
ನನ್ನ 40 ವರ್ಷದ ವೃತ್ತಿ ಜೀವನದಲ್ಲಿ ನಾನು ವಾರಕ್ಕೆ 70 ಗಂಟೆ ಕೆಲಸ ಮಾಡುತ್ತಿದ್ದೆ. 1994ರವರೆಗೆ ನಾನು ವಾರದಲ್ಲಿ 80ರಿಂದ 90 ಗಂಟೆ ಕೆಲಸ ಮಾಡುತ್ತಿದ್ದೆ. ಅದು ವ್ಯರ್ಥ ಆಗಿಲ್ಲ. ಪ್ರತಿಯೊಂದು ದೇಶ ಕಠಿಣ ಪರಿಶ್ರಮದಿಂದ ಮಾತ್ರ ಅಭಿವೃದ್ಧಿ ಆಗಲು ಸಾಧ್ಯ.
ಮಧ್ಯಮ ಆದಾಯ ರಾಷ್ಟ್ರ ಆಗುವುದಕ್ಕೆ ಅಂದರೆ (8 ಸಾವಿರ ಡಾಲರ್‌ನಿಂದ 10 ಸಾವಿರ ಡಾಲರ್ ವಾರ್ಷಿಕ ಆದಾಯ) ಭಾರತಕ್ಕೆ ಇನ್ನೂ 16ರಿಂದ 18 ವರ್ಷ ಬೇಕು. ಮಹತ್ವಾಕಾಂಕ್ಷೆ, ಕರಿಠ ಪರಿಶ್ರಮ ಮತ್ತು ಉತ್ಪಾದಕತೆ ಪ್ರಮಾಣದ ಹೆಚ್ಚಳ ಮತ್ತು ಶಿಸ್ತಿನ ವರ್ಧನೆ ಮೂಲಕವಷ್ಟೇ ಪ್ರತಿಯೊಂದು ರಾಷ್ಟ್ರವೂ ಆರ್ಥಿಕ ಪ್ರಗತಿ ಸಾಧಿಸಿದೆ. ನನ್ನ ಕ್ಷೇತ್ರದಲ್ಲಿ ನನಗಿಂತ ಉತ್ತಮ ಸಾಧನೆ ಮಾಡಿದವರ ಮಾತನ್ನು ಮಾತ್ರ ಕೇಳುತ್ತೇನೆ
ಎಂದು ನಾರಾಯಣಮೂರ್ತಿ ಅವರು ಹೇಳಿದ್ದಾರೆ.
ADVERTISEMENT
ADVERTISEMENT