ಗೋವಾ ಬಿಜೆಪಿಯ ಪ್ರಮೋದ್ ಸಾವಂತ್ ಸಚಿವ ಸಂಪುಟದ ಏಕೈಕ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದ ಜೆನ್ನಿಫರ್ ಮಾನ್ಸರೇಟ್ ತಮ್ಮ ಸ್ಥಾನವನ್ನು ಪತಿ ಅಟನಾಸಿಯೋ ಮಾನ್ಸರೇಟ್ ಅವರಿಗೆ ಬಿಟ್ಟಕೊಟ್ಟಿದ್ದಾರೆ. ಇವರು ಪ್ರಮೋದ್ ಸಾವಂತ್ ಸಂಪುಟದ ನೂತನ ಸಚಿವರಾಗಿದ್ದಾರೆ.
ಗೋವಾ ಸಿಎಂ ಪ್ರಮೋದ್ ಸಾವಂತ್ ತಮ್ಮ ಸಂಪುಟದಲ್ಲಿ ಮಿ.ಮಾನ್ಸರೇಟ್, ರೋಹನ್ ಕೌಂಟೆ, ರವಿ ನಾಯಕ್ ಮತ್ತು ಶುಭಾಷ್ ಶಿರೋಡ್ಕರ್ ಸೇರಿದಂತೆ ಹಲವು ನೂತನ ಸಚಿವರಿಗೆ ಅವಕಾಶ ನೀಡಿದ್ದಾರೆ.
ಅಟನಾಸಿಯೋ ಮಾನ್ಸರೇಟ್ ಅವರು ಪಣಜಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಮೂರು ಬಾರಿ ಗೋವಾ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ತಾಲಿಗೋ ಕ್ಷೇತ್ರದ ಶಾಸಕಿ ಹಾಗೂ ಪ್ರಮೋದ್ ಸಾವಂತ್ ಮೊದಲ ಸಚಿವ ಸಂಪುಟದ ಸಚಿವೆಯಾಗಿದ್ದ ಜೆನ್ನಿಫರ್ ಮಾನ್ಸರೇಟ್ ಅವರನ್ನು ಅಟಾನಿಯೋ ಮಾನ್ಸರೇಟ್ ವಿವಾಹವಾಗಿದ್ದಾರೆ.
ಅಟಾನಿಯೋ ಮಾನ್ಸರೇಟ್ 10 ಜನ ಕಾಂಗ್ರೆಸ್ ಶಾಸಕರೊಂದಿಗೆ 2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇವರು ಮನೋಹರ್ ಪರಿಕ್ಕರ್ ಸಚಿವ ಸಂಪುಟದಲ್ಲಿ ನಗರ ಯೋಜನಾ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.