ಮೇ 22ರಂದು ವಿಶ್ವ ಕನ್ನಡ ಚೈತ್ರ ವಸಂತೋತ್ಸವ

ವಿಶ್ವ ಕನ್ನಡಿಗರ ಒಕ್ಕೂಟ ಇದೇ ಮೇ 22ರಂದು ವಿಶ್ವ ಕನ್ನಡ ಚೈತ್ರ ವಸಂತೋತ್ಸವವನ್ನು ಆಯೋಜಿಸಿದೆ.

ವಸಂತೋತ್ಸವವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಟಿ ಎಸ್ ನಾಗಾಭರಣ ಅಧ್ಯಕ್ಷತೆ ವಹಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ, ಅನಿವಾಸಿ ಭಾರತೀಯ ಸಮಿತಿಯ ಕಾರ್ಯದರ್ಶಿ ಕೆಎಎಸ್ ಅಧಿಕಾರಿ ಆಗಿರುವ ಲಕ್ಷö್ಮಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ವಿಶ್ವ ಕನ್ನಡಿಗರ ಸಂಘಟನೆಗಳ ಒಕ್ಕೂಟದ ಫೇಸ್ ಬುಕ್ ಪೇಜ್‌ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮೇ 22ರಂದು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.

ಅಮೆರಿಕ, ಲಂಡನ್, ಜರ್ಮನಿ, ಇಟಲಿ, ದುಬೈ, ಸಿಂಗಾಪುರ್, ನೆದರ್ ಲ್ಯಾಂಡ್, ಆಸ್ಟೆçÃಲಿಯಾದಲ್ಲಿರುವ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.

LEAVE A REPLY

Please enter your comment!
Please enter your name here