ವಿಧಾನಪರಿಷತ್ತಿನ ಒಂದು ಸ್ಥಾನದ ಉಪಚುನಾವಣೆಗೆ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಬಾಬುರಾವ್ ಚಿಂಚನಸೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತ ಇದ್ದ ಕಾರಣ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ನಾಮಪತ್ರ ಪಡೆಯಲು ಗುರುವಾರ ಕಡೆಯ ದಿನವಾಗಿತ್ತು.
ನಾಮಪತ್ರ ಹಿಂದಕ್ಕೆ ಪಡೆಯುವ ಸಮಯ ಮುಗಿಯುತ್ತಿದ್ದಂತೆ ಚಿಂಚನಸೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ. ಚಿಂಚನಸೂರು ಅವರ ಸದಸ್ಯತ್ವದ ಅವಧಿ 2024 ರ ಜೂನ್ 17 ರವರೆಗೆ ಇದೆ.