ಉಳ್ಳಾಲದ ಹಿಂದೂ ಯುವ ಸೇನೆಯಲ್ಲಿ ಸಕ್ರಿಯರಾಗಿದ್ದ ಜಯಂತ್ ಕುಂಪಲ (Jayant Kampalli) ಅವರು ಕುಂಪಲದ ಕೃಷ್ಣನಗರದಲ್ಲಿನ ಬಾಡಿಗೆ ಮನೆಯಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಯಂತ್ (50) ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ಜಯಂತ್ (Jayant Kampalli) ಅವರು ತೊಕ್ಕೊಟ್ಟಿನಲ್ಲಿ ಆಟೋರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದರು. ಕುಂಪಲದ ಹನುಮಾನ್ ನಗರದಲ್ಲಿ ಹೊಸ ಮನೆಯನ್ನು ಕಟ್ಟಿಸುತ್ತಿದ್ದ ಅವರು ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಶುಕ್ರವಾರ ಪಾಲ್ಗೊಂಡಿದ್ದರು. ಕಾರ್ಯಕ್ರಮದಿಂದ ಮರಳುವಾಗ ಅವರ ಮೊಬೈಲ್ ಫೋನ್ ಕಳೆದುಕೊಂಡಿದ್ದರು.
ಇದನ್ನೂ ಓದಿ : ಹೆಚ್ಚಾದ ಸಾಲಗಾರರ ಕಾಟ : ಜಿಮ್ ಮಾಲೀಕ ಆತ್ಮಹತ್ಯೆ
ಹೊಸ ಫೋನ್ ಖರೀದಿಸಲು 5 ಸಾವಿರ ರೂ. ಸಾಲ ನೀಡುವಂತೆ ಗೆಳೆಯರನ್ನು ಕೋರಿದ್ದರು. ಈ ವಿಚಾರವಾಗಿ ಬೇಸರಗೊಂಡಿದ್ದರು. ಪತ್ನಿ ಮನೆಗೆ ಮರಳಿದಾಗ ಜಯಂತ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.