ನಟ, ನಿರ್ದೇಶಕ ಉಪೇಮದ್ರ ಅವರು ಸುದೀರ್ಘ 7 ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ.
ಅಭಿಮಾನಿಗಳ ಮಅನಸದಿಂದ ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಎಂದು ಖ್ಯಾತನಾಮರಾಗಿರುವ ಉಪೇಂದ್ರ ಅವರ ನಿರ್ದೇಶನದ ಚಿತ್ರಗಳೇ ವಿಶಿಷ್ಟವಾದವುಗಳು.
ಇದೀಗ, ನಟ ಉಪೇಂದ್ರ ಅವರು ತಮ್ಮ ನಾಯಕ ನಟನೆಯ ಯುಐ ಚಿತ್ರಕ್ಕೆ ಇಂದು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಲಹರಿ ಫಿಲಂಸ್, ವೀನಸ್ ಎಂಟರ್ಪ್ರೈಸಸ್ ಜಂಟಿಯಾಗಿ ಯುಐ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಯುಐ ಚಿತ್ರ ಟೈಟಲ್ ಲಾಂಚ್ ಹಾಗೂ ಮುಹೂರ್ತ ಕಾರ್ಯಕ್ರಮಗಳಿಂದಲೇ ಇಡೀ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಚಿತ್ರದ ಪೋಸ್ಟರ್ಗೆ ಇಡೀ ಚಿತ್ರರಂಗವೇ ಶಹಬ್ಬಾಸ್ಗಿರಿ ನೀಡಿದೆ.
ಉಪೇಮದ್ರ ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ತಂತ್ರಜ್ಞರೆಲ್ಲ ಯುವಕರು ಆಗಿರುವುದೇ ಒಂದು ವಿಶೇಷವಾಗಿದೆ. ಯುಐ ಇಂದಿನಿಂದ ಚಿತ್ರೀಕರಣ ಆರಂಭಿಸಿದ್ದು, ಶೀಘ್ರವೇ ಚಿತ್ರವನ್ನು ತೆರೆಯ ಮೇಲೆ ತರಲು ಚಿತ್ರತಂಡ ಆಶಿಸುತ್ತಿದೆ.