ಬೆಂಗಳೂರು: ನಾಯಿ ವಿಚಾರಕ್ಕೆ ಮಹಿಳೆಯರಿಬ್ಬರು ಪರಸ್ಪರ ಕಿತ್ತಾಡಿಕೊಂಡು ಘಟನೆ ಬೆಂಗಳೂರಿನ ಜೀವನ್ ಭೀಮಾ ನಗರದಲ್ಲಿ ನಡೆದಿದೆ.
ಪಂಜಾಬ್ ಮೂಲದ ಪೂಜಾ ಕಪೂರ್ ಕಳೆದ ಒಂದೂವರೆ ವರ್ಷದಿಂದ ಪ್ರಮೀಳಾ ಎಂಬವರ ಮನೆಯಲ್ಲಿ ಭೋಗ್ಯಕ್ಕೆ (Lease) ಇದ್ದಾರೆ. ಪೂಜಾ ಒಂದು ನಾಯಿಯನ್ನು ಸಾಕಿಕೊಂಡಿದ್ದಾರೆ. ನಾಯಿ ಕೊಳಕು ಮಾಡುತ್ತದೆ ಮತ್ತು ಸರಿಯಾಗಿ ಸ್ವಚ್ಚಗೊಳಿಸುವುದಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕರಾದ ಪ್ರಮೀಳಾ ಹಾಗೂ ಪೂಜಾ ನಡುವೆ ಆಗಾಗ ಜಗಳ ನಡೆಯುತಿತ್ತು.
ಎರಡು ದಿನಗಳ ಹಿಂದೆ ನಾಯಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಆಗ ಇಬ್ಬರ ನಡುವೆ ಮಾತಿಗೆ ಬೆಳೆದು ಕೊನೆಗೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.