ಮಂಗಳೂರಲ್ಲಿ ನಡೆದ ಹಲಸಿನ ಮೇಳಕ್ಕೆ ವ್ಯಾಪಾರ ಮಾಡಲು ಆಗಮಿಸಿದ ಇಬ್ಬರು ವ್ಯಾಪಾರಿಗಳು ಪಣಂಬೂರು ಬೀಚ್ನಲ್ಲಿ ಕೊಚ್ಚಿಹೋಗಿದ್ದಾರೆ.
ಮೈಸೂರು ಜಿಲ್ಲೆಯ ಜಯನಗರ ನಿವಾಸಿಗಳಾದ ದಿವಾಕರ ಆರಾಧ್ಯ (40) ಹಾಗೂ ನಿಂಗಪ್ಪ (65) ಮೃತಪಟ್ಟವರು.
ಮೈಸೂರಿನ ಅಗ್ರಹಾರದಲ್ಲಿರುವ ಫುಡ್ ಆಂಡ್ ಬೇವರೇಜಸ್ ಫ್ಯಾಕ್ಟರಿ ನಡೆಸುತ್ತಿದ್ದ ದಿವಾಕರ ಆರಾಧ್ಯ ಎಂಬುವರು ಇತರರೊಂದಿಗೆ ಮಂಗಳೂರು ನಗರದಲ್ಲಿ ಮೇ 27ರಿಂದ 29ವರೆಗೆ ನಡೆದ ಹಲಸು ಮೇಳದಲ್ಲಿ ಭಾಗವಹಿಸಲು ಬಂದಿದ್ದರು.
ನಿನ್ನೆ ಸಂಜೆಯವರೆಗೆ ಹಲಸು ಮೇಳದಲ್ಲಿ ವ್ಯಾಪಾರ ಮಾಡಿದ್ದ ಇವರು ಇವತ್ತು ಬೆಳಗ್ಗೆ 7 ಗಂಟೆಗೆ ಪಣಂಬೂರು ಬೀಚ್ಗೆ ತೆರಳಿದ್ದರು.
ಸಮುದ್ರದಲ್ಲಿ ಮೋಜು ಮಾಡುವ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ.
ಶನಿವಾರ ಉಳ್ಳಾಲ ಬೀಚ್ನಲ್ಲಿ ಮೈಸೂರು ಮೂಲದ ಮಹಿಳೆಯೋರ್ವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.