ತ್ರಿಪುರಾ ಬಿಜೆಪಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೆಬ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
2018 ರಲ್ಲಿ ತ್ರಿಪುರಾ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಸರ್ಕಾರ ರಚನೆ ಮಾಡಿತ್ತು.
ಮುಂದಿನ ವರ್ಷ ಮಾರ್ಚ್ 2023 ರಲ್ಲಿ ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಬೆನ್ನಲ್ಲೇ, ಕೇಂದ್ರದ ಹೈಕಮಾಂಡ್ ಸಿಎಂ ಬಿಪ್ಲಬ್ ಕುಮಾರ್ ದೆಬ್ ಅವರಿಂದ ರಾಜೀನಾಮೆ ಪಡೆದಿದೆ.