ತಿರುಪತಿಯ ಗೋವಿಂದರಾಜಸ್ವಾಮಿ ದೇಗುಲದಲ್ಲಿ ಅಪಶೃತಿ – ಅರಳಿಮರ ಬಿದ್ದು ಭಕ್ತ ಬಲಿ

ತಿರುಪತಿಯ ಪುರಾಣ ಪ್ರಸ್ಇದ್ಧ ಗೋವಿಂದರಾಜಸ್ವಾಮಿ ದೇವಾಲಯದ ಆವರಣದಲ್ಲಿ ಅನಾಹುತ ಸಂಭವಿಸಿದೆ.

ದೇಗುಲದ ಧ್ವಜಸ್ತಂಭದ ಬಳಿ ಇರುವ ನೂರಾರು ವರ್ಷಗಳಷ್ಟು ಹಳೆಯದಾದ ಬೃಹತ್ ಅರಳಿಮರ ಏಕ್​ದಂ ಉರುಳಿಬಿದ್ದಿದೆ.

ದುರಂತದಲ್ಲಿ ಭಕ್ತರೊಬ್ಬರು ಬಲಿ ಆಗಿದ್ದಾರೆ. ಆರು ಮಂದಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಕಡಪಾ ನಿವಾಸಿ ಡಾಕ್ಟರ್ ಗುರ್ರಪ್ಪ ಎಂದು ಗುರುತಿಸಲಾಗಿದೆ.

ಗೋವಿಂದರಾಜಸ್ವಾಮಿ ದೇಗುಲಕ್ಕೆ ಬರುವ ಭಕ್ತರೆಲ್ಲಾ ಸಾಮಾನ್ಯವಾಗಿ ಅರಳಿಕಟ್ಟೆ ಮೇಲೆ ಕುಳಿತು ಒಂದಿಷ್ಟು ವಿಶ್ರಮಿಸುತ್ತಿದ್ದರು. ಜೊತೆಗೆ ಅಲ್ಲಿ ಪ್ರತಿಷ್ಠಾಪಿಸಲಾಗಿರುವ ನಾಗರ ವಿಗ್ರಹಗಳಿಗೆ ಪೂಜೆ ಸಲ್ಲಿಸುತ್ತಿದ್ದರು.