ಮಲೆನಾಡಿನ ರೈತಾಪಿವರ್ಗ ದಲ್ಲಿ ಜನಿಸಿ ಹಿರಿಮೆ ತಂದ ನ್ಯಾಯಮೂರ್ತಿ ಗಳಾದ ಹೆಚ್.ಪಿ.ಸಂದೇಶ್ ಅವರಿಗೆ ವರ್ಗಾವಣೆ ಬೆದರಿಕೆಯ ವಿಷಯವಾಗಿ ವಕೀಲರಾದ ಎನ್ಎಸ್ ಗೋಪಾಲ್ ಮತ್ತು ಜಿ ಅಡ್ವೋಕೇಟ್ ಅವರು ಬಹಿರಂಗ ಪತ್ರ ಬರೆದಿದ್ದಾರೆ.
ನ್ಯಾಯಾಲಯದ ಬಗ್ಗೆ ಮತ್ತು ನ್ಯಾಯಾಧೀಶರನ್ನು ಉದ್ದೇಶಿಸಿ ನಿಂದನೆ, ಆಧಾರರಹಿತ ಆರೋಪ, ಹೆದರಿಸುವುದು ಮಾಡಬೇಡಿ, ನ್ಯಾಯಾಂಗ ಸ್ವಚ್ಚವಾಗಿದೆ. ನಾವು ನ್ಯಾಯಾಲಯದ ಪರ ಮಾತನಾಡಲು ವಕೀಲರಿನ್ನು ಬದುಕಿದ್ದೇವೆ. ಯಾರು ಆರೋಪಿಸಿದರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನ್ಯಾಯಾಂಗವು ಸಮಾಜದ ಅವಿಭಾಜ್ಯ ಅಂಗ.ನ್ಯಾಯಾಂಗ ಪ್ರತ್ಯೇಕವಾಗಿದೆ. ಸದೃಢವಾಗಿದೆ.
ಕಾರ್ಯಾಂಗ ಯಾವ ರೀತಿ ಇದೆ ಎಲ್ಲರಿಗು ಗೊತ್ತಿದೆ. ಎಲ್ಲ ಸರ್ಕಾರಿ ಇಲಾಖೆಗಳಲ್ಲೂ ಮೂರು ವರ್ಷದ ನಂತರ ವರ್ಗಾವಣೆ ಕಡ್ಡಾಯವಾಗಿ ಆಗಬೇಕು. ಈಗ ಆಗುತ್ತಿದೆಯೇ. ನಿಮಗೆ ಬೇಕು ಬೇಕಾದ ಜಾಗಕ್ಕೆ ವರ್ಗಾವಣೆ, ಆಯಕಟ್ಟಿನ ಜಾಗಗಳುಬೇಕು. ಭ್ರಷ್ಟರು ಕಾರ್ಯಾಂಗದಲ್ಲಿದ್ದಾರೆ ತಿಳಿಯಿರಿ. ನ್ಯಾಯಾಂಗದದಲ್ಲಿ ಪ್ರತಿಮೂರು ವರ್ಷಕ್ಕೊಮ್ಮೆ ನಿಯಮಾನುಸಾರ, ವರ್ಗಾವಣೆಯಾಗುತ್ತದೆ. ಇಡೀ ರಾಜ್ಯದ ಉದ್ದಗಲಕ್ಕೂ ನ್ಯಾಯಾಧೀಶರು ವರ್ಗಾವಣೆ ಯಾಗಿ ಕಷ್ಟ ಸುಖವೆನ್ನದೆ ಸೇವೆಸಲ್ಲಿಸುತ್ತಿದ್ದಾರೆ. ಸಮಾಜ ನ್ಯಾಯಾಂಗದ ಮೇಲೆ ನಂಬಿಕೆ, ಸದಭಿಪ್ರಾಯವಿಟ್ಟಿದೆ.
ನ್ಯಾಯಮೂರ್ತಿಗಳಾದ ಹೆಚ್.ಪಿ.ಸಂದೇಶ್ ವಿರುದ್ಧ ಲಘುವಾಗಿ ಮತ್ತು ಆಧಾರರಹಿತವಾಗಿ ಮಾತನಾಡುವ ಕಾರ್ಯಾಂಗದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಬಂದಿದೆ.
ನ್ಯಾಯಪೀಠದ ಬಗ್ಗೆ, ಲಘುವಾದ ಮಾತುಗಳನ್ನು ಆಡಬೇಡಿ. ನ್ಯಾಯಾಂಗದ ಬಗ್ಗೆ ಅಪಾರ ನಂಬಿಕೆಯಿಂದ ಕೋರ್ಟ್ಗೆ ಬರುವ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಉದ್ದೇಶ ವಕೀ ಲರಿಗಿದೆ. ನ್ಯಾಯಾಂಗದ ವಿಷಯದಲ್ಲಿ ಮೂಗುತೂರಿಸ ಬೇಡಿ. ACB ಭ್ರಷ್ಟಾಚಾರವನ್ನು ಹೆಚ್ಚು ಮಾಡಿದೆಯೆ ಹೊರತು,ಕಡಿಮೆ ಮಾಡಿಲ್ಲ. ತ್ವರಿತ ನ್ಯಾಯ ಒದಗಿಸುವ ಗುರಿ ನ್ಯಾಯಾಂಗ ಹೊಂದಿದೆ. ಆರೋಪಿಗಳಾದ ADGP/IAS ನಿಮ್ಮದು ದುರ್ವತನೆ ಇಡೀ ರಾಜ್ಯ ಸಾಕ್ಷಿಯಾಗಿದೆ.
ನ್ಯಾಯಾಂಗ ಗಾಜಿನಮನೆಯಲ್ಲಿಲ್ಲ ಉಕ್ಕಿನ ಕೋಟೆಯಲ್ಲಿದೆ ಅದನ್ನು ಉಳಿಸಿ ಕೊಳ್ಳುವ ಸಾಮರ್ಥ್ಯ ಸಮಾಜಕ್ಕೆ ಇದೆ. ವಕೀಲರ ಜವಾಬ್ದಾರಿಯು ಇದೆ ಎಂದು ವಕೀಲರು ಬಹಿರಂಗ ಪತ್ರ ಬರೆದಿದ್ದಾರೆ.