ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯ – ಭಜರಂಗಿ ಲಯನ್ಸ್ ಗೆ ಒಲಿದ ವಿಜಯ

TPL

ಎನ್ 1 ಅಕಾಡೆಮಿ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ( TPL ) ಮುಕ್ತಾಯಗೊಂಡಿದೆ. ಒಂದೊಳ್ಳೆ ಧ್ಯೇಯ ಇಟ್ಟುಕೊಂಡು ಟೂರ್ನಿ ಏರ್ಪಡಿಲಾಗಿತ್ತು. ಹಿರಿಯ ಕಲಾವಿದರಿಗೆ ಈ ಪಂದ್ಯಾವಳಿಯಿಂದ ಸಹಾಯ ಮಾಡುವುದಾಗಿ ಆಯೋಜಕ ಸುನಿಲ್ ಕುಮಾರ್ ಬಿ ಆರ್ ತಿಳಿಸಿದ್ದರು.

ಅದರಂತೆ ಧಾರಾವಾಹಿ ಪ್ರೊಡಕ್ಷನ್ ಮ್ಯಾನೇಜರ್ ಪಾರ್ಥ ಎಂಬುವವರಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ಎರಡು ಕಿಡ್ನಿ ಕಳೆದುಕೊಂಡಿದ್ದ ಅವರಿಗೆ ಧನ ಸಹಾಯ ಮಾಡಲಾಗಿದೆ ಎಂದು ಸುನಿಲ್ ಹೇಳಿದ್ದಾರೆ.

TPL

ಇದೇ 18 ರಿಂದ 20 ರವರೆಗೆ ನಡೆದ ಮೂರು ದಿನದ ಕ್ರಿಕೆಟ್ ಪಂದ್ಯಾವಳಿಯಲ್ಲಿ ( TPL ) ರಂಜಿತ್ ಕುಮಾರ್ ನಾಯಕತ್ವದ ಭಜರಂಗಿ ಲಯನ್ಸ್ ಟಿಪಿಎಲ್ ಕಪ್ ಗೆ ಮುತ್ತಿಟ್ಟಿದೆ. ಹರ್ಷ ಸಿಎಂ ಗೌಡ ನಾಯಕತ್ವದ ಎಂಜಲ್ XI ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಒಟ್ಟು ಆರು ತಂಡಗಳು ಈ ಟೂರ್ನಮೆಂಟ್ ನಲ್ಲಿ ಭಾಗಿಯಾಗಿದ್ದವು.

ಇದನ್ನೂ ಓದಿ : ಟೆಲಿವಿಷನ್ ಪ್ರೀಮಿಯರ್ ಲೀಗ್-TPL ಇವತ್ತಿನಿಂದ ಶುರು

LEAVE A REPLY

Please enter your comment!
Please enter your name here