ಟೆಕ್ಸ್ಟ್ ಕ್ಲಾ (Text Claw)- ಗಂಟೆಗಟ್ಟಲೇ ಫೋನ್ ನಲ್ಲಿ ಚಾಟಿಂಗ್, ಸ್ಕ್ರಾಲಿಂಗ್ ಮಾಡುವುದರಿಂದ ಬೆರಳು ನೋವು, ಕೈಗಳ ಸ್ನಾಯು ನೋವು
ಟೆಕ್ ನೆಕ್ (Tech Neck) – ಕತ್ತು ಬಾಗಿಸಿ ಮೊಬೈಲ್ ನೋಡುವುದರಿಂದ ಕತ್ತಿನ ಭಾಗದ ಮೇಲೆ ಭಾರ ಬಿದ್ದು ನೋವು ಹೆಚ್ಚಾಗುತ್ತದೆ
ಫ್ಯಾಂಟಮ್ ವೈಬ್ರೇಶನ್ ಸಿಂಡ್ರೋಮ್(Fantom vibration syndrome ) – ಕೆಲವರು ಫೋನ್ ರಿಂಗ್ ಆಗದಿದ್ದರೂ, ಕಾಲ್, ಮೆಸ್ಸೇಜ್ ಬಂದಂತೆ, ಮೊಬೈಲ್ ವೈಬ್ರೇಟ್ ಆದಂತೆ ಫೀಲ್ ಆಗಿ, ಪದೇ ಪದೇ ಮೊಬೈಲ್ ಚೆಕ್ ಮಾಡಿಕೊಳ್ಳುವುದು.
ಕಂಪ್ಯೂಟರ್ ವಿಷನ್ ಸಿಂಡ್ರೋಮ್ ( Computer vision syndrome) – ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿರುವ ಸಣ್ಣ ಗಾತ್ರದ ಅಕ್ಷರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಓದುವುದು. ಸ್ಕ್ರೀನ್ ಮೇಲೆ ಹೆಚ್ಚು ಹೊತ್ತು ದೃಷ್ಟಿ ನೆಟ್ಟಿರುವುದರಿಂದ ಕಣ್ಣುಗಳ ಮೇಲೆ ಒತ್ತಡ ಹೆಚ್ಚುತ್ತದೆ. ಕಣ್ಣುಗಳು ಸುಸ್ತಾಗುತ್ತವೆ. ಇದರಿಂದ ದೃಷ್ಟಿ ದೋಷ ಉಂಟಾಗುವ ಸಾಧ್ಯತೆ.
ನೋಮೋ ಫೋಬಿಯಾ (Nomo phobia) – ಮೊಬೈಲ್ ಎಲ್ಲಿ ಕೈ ಜಾರಿ ಹೋಗುವುದೋ ಎಂದು ಪದೇ ಪದೇ ಭಯ ಬೀಳುವುದು
ಸ್ಮಾರ್ಟ್ ಫೋನ್ ಪಿಂಕಿ (Smart phone Pinky) – ಕೊನೆ ಬೆರಳ ಮೇಲೆ ಮೊಬೈಲ್ ಇಟ್ಟು ಬ್ರೌಸಿಂಗ್, ಚಾಟಿಂಗ್ ಮಾಡುತ್ತಾರೆ. ಇದರಿಂದ ಮೊಬೈಲ್ ಭಾರವೆಲ್ಲ ಆ ಬೆರಳ ಮೇಲೆ ಬಿದ್ದು ಆ ಬೆರಳು ಸೊಟ್ಟಗಾಗುವುದು. ನೋವಿಗೆ ತುತ್ತಾಗುವುದು.
ಸೆಲ್ ಫೋನ್ ಎಲ್ಬೋ (cell phone Elbow) – ಮೊಬೈಲ್ ಹೆಚ್ಚು ಹೊತ್ತು ಕೈಯಲ್ಲಿ ಹಿಡಿಯುವ ಕಾರಣದಿಂದ ಉಂಟಾಗುವ ಮೊಣಕೈ ನೋವು. ಮೂಳೆ ನೋವು.
ಇದರ ಜೊತೆಗೆ ಒತ್ತಡಕ್ಕೆ ಒಳಗಾಗುವುದು. ನಿದ್ರಾಹೀನತೆ, ಸೈಬರ್ ಅಪರಾಧಗಳಲ್ಲಿ ಹೀಗೆ ಹಲವು ರೋಗಗಳು ಇವೆ. ನೀವು ಯಾವ ಮೊಬೈಲ್ ರೋಗದಿಂದ ಬಳಲುತ್ತಿದ್ದೀರಿ.. ಯಾವ ಮೊಬೈಲ್ ರೋಗದ ಲಕ್ಷಣ ಕಾಣಿಸಿಕೊಂಡಿವೆ. ಈಗಲೇ ಎಚ್ಚೆತ್ತುಕೊಳ್ಳಿ. ಇತರರಲ್ಲಿ ಜಾಗೃತಿ ಮೂಡಿಸಿ. ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ. ಸಲಹೆ ಸೂಚನೆ ತಿಳಿಸಿ