ರೇವ್ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವಿಸಿದ್ದ ಆರೋಪದಡಿ ನಟಿ ಹೇಮಾ ಅವರನ್ನು ಬೆಂಗಳೂರು ನಗರ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.
ರೇವ್ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವನೆ ಸಂಬಂಧ ವಿಚಾರಣೆ ಹಾಜರಾಗಿದ್ದ ನಟಿ ಹೇಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಿತ್ರ ಎಂದರೆ ಇವತ್ತು ವಿಚಾರಣೆಗೆ ಹಾಜರಾಗುವ ವೇಳೆ ತೆಲುಗು ನಟಿ ಹೇಮಾ ಬುರ್ಖಾ ಧರಿಸಿ ಬಂದಿದ್ದರು.
ಮೇ 20ರಂದು ಬೆಂಗಳೂರು ಹೊರವಲಯದ ಆನೇಕಲ್ನಲ್ಲಿ ನಡೆದಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪಾರ್ಟಿಯಲ್ಲಿದ್ದ 86 ಮಂದಿಯನ್ನು ಮಾದಕ ದ್ರವ್ಯ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಆ ವೈದ್ಯಕೀಯ ಪರೀಕ್ಷೆಯಲ್ಲಿ ನಟಿ ಹೇಮಾ ಅವರು ಮಾದಕ ದ್ರವ್ಯ ಸೇವಿಸಿದ್ದು ದೃಢವಾಗಿತ್ತು.
ADVERTISEMENT
ADVERTISEMENT