ಕಿರುತೆರೆಯ ಧಾರಾವಾಹಿಗಳಲ್ಲಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ನಟಿ ಪಲ್ಲವಿ ಡೇ ಅವರು ನಿಧನರಾಗಿದ್ದಾರೆ. ಕೋಲ್ಕತ್ತದ ಗರ್ಫಾದಲ್ಲಿರುವ ಫ್ಲಾಟ್ನಲ್ಲಿ ಪಲ್ಲವಿ ವಾಸವಿದ್ದರು.
ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿ, ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಹೇಳಲಾಗಿದೆ. ಆದರೆ ಪಲ್ಲವಿ ಕುಟುಂಬಸ್ಥರು, ನಮ್ಮ ಮಗಳು ಪಲ್ಲವಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ. ಈ ಸಾವಿನ ಹಿಂದೆ ಯಾರದೋ ಕೈವಾಡ ಇದೆ ಎಂದು ಆರೋಪ ಮಾಡಿದ್ದಾರೆ.
ಘಟನೆ ಬೆಳಕಿಗೆ ಬಂದ ತಕ್ಷಣವೇ ಪಲ್ಲವಿ ಅವರನ್ನು ಬಂಗುರ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ವೈದ್ಯರು ಮೃತಪಟ್ಟಿರುವ ಬಗ್ಗೆ ಖಚಿತ ಪಡಿಸಿದರು. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಲ್ಲವಿ ಡೇ ಅವರು ತಮ್ಮ ಬಾಯ್ ಫ್ರೆಂಡ್ ಸಾಗ್ನಿಕ್ ಚಕ್ರವರ್ತಿ ಜೊತೆಗೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಗ್ನಿಕ್ ಚಕ್ರವರ್ತಿ ಅವರನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಪಲ್ಲವಿ ಸಾವಿನಿಂದಾಗಿ, ಅವರ ಅಭಿಮಾನಿಗಳು, ಆಪ್ತರು, ಸ್ನೇಹಿತರು ಅಘಾತಕ್ಕೆ ಒಳಗಾಗಿದ್ದಾರೆ.
ಇತ್ತ ಸಾಗ್ನಿಕ್ ಪೋಷಕರು ತಮ್ಮ ಪುತ್ರ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಪಲ್ಲವಿ ಮತ್ತು ಸಾಗ್ನಿಕ್ ಮಧ್ಯೆ ದೊಡ್ಡ ಸಮಸ್ಯೆ ಇರಲಿಲ್ಲ. ಅವರಿಬ್ಬರು ಒಟ್ಟಿಗೆ ಇದ್ದರು. ನಾವು ಇದಕ್ಕೆ ಸಂಪೂರ್ಣ ಒಪ್ಪಿಗೆಯನ್ನೇನೂ ನೀಡಿರಲಿಲ್ಲವಾದರೂ, ಅವರು ದೊಡ್ಡವರಾಗಿರುವ ಕಾರಣ, ನಾವು ಅವರಿಗೆ ಅವಕಾಶ ನೀಡಿದ್ದೆವು ಎಂದು ಪೋಷಕರು ತಿಳಿಸಿದ್ದಾರೆ.
https://youtu.be/PIY7X7wa7QM