ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ತೀರ್ಮಾನ ಸರಿ ಎಂದು ಸುಪ್ರೀಂಕೋರ್ಟ್‌ನ ಸಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿದೆ. ವಿಶೇಷ ಸ್ಥಾನಮಾನ ರದ್ದುಪಡಿಸುವ ತೀರ್ಮಾನವನ್ನು ಎತ್ತಿಹಿಡಿಯುವುದಕ್ಕೆ ಸುಪ್ರೀಂಕೋರ್ಟ್ ನೀಡಿರುವ ಕಾರಣಗಳು ಹೀಗಿವೆ:
– ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ವಿಧಿ ೩೭೦ ತಾತ್ಕಾಲಿಕ ವ್ಯವಸ್ಥೆಯಾಗಿತ್ತಷ್ಟೇ, ಆ ಸ್ಥಾನಮಾನ ಶಾಶ್ವತವಾಗಿರಲಿಲ್ಲ
– ಭಾರತದ ಗಣರಾಜ್ಯದೊಳಗೆ ಜಮ್ಮು-ಕಾಶ್ಮೀರ ರಾಜ್ಯವಾಗಿ ವಿಲೀನ ಆದ ಬಳಿಕ ಆ ರಾಜ್ಯ ಆಂತರಿಕ ಸಾರ್ವಭೌಮತೆ ಹೊಂದಲು ಸಾಧ್ಯವಿಲ್ಲ
– ಭಾರತ ಗಣರಾಜ್ಯದೊಳಗೆ ಸೇರಲು ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಆ ಜಮ್ಮು-ಕಾಶ್ಮೀರ ಸಾರ್ವಭೌಮತೆಯ ಯಾವುದೇ ಲಕ್ಷಣಗಳನ್ನು ಹೊಂದಲು ಸಾಧ್ಯವಿಲ್ಲ
– ರಾಷ್ಟ್ರಪತಿ ಆಡಳಿತ ಹೇರಿಕೆಯ ಆದೇಶವನ್ನು ಪ್ರಶ್ನಿಸಿಲ್ಲ
– ರಾಷ್ಟ್ರಪತಿ ಆಡಳಿತ ಹೇರಿಕೆಗೂ ರಾಷ್ಟ್ರಪತಿಗಳ ಆಧಿಕಾರ ಚಲಾವಣೆಗೂ ತಾರ್ಕಿಕ ಸಂಬಂಧ ಇರಬೇಕು
– ರಾಜ್ಯಕ್ಕೆ ಕಾಯ್ದೆ ರೂಪಿಸುವ ಸಂಸತ್ತಿನ ಅಧಿಕಾರದಿಂದ ಕಾನೂನು ಮಾಡುವ ಅಧಿಕಾರವನ್ನು ಹೊರಗಿಡಲು ಸಾಧ್ಯವಿಲ್ಲ
– ಸಂವಿಧಾನ ಸಭೆಯೇ ತನ್ನ ಕಾರ್ಯವನ್ನು ಅಂತ್ಯಗೊಳಿಸಿರುವಾಗ ರಾಷ್ಟ್ರಪತಿಗಳ ಆದೇಶದ ಮೇಲೆ ಯಾವುದೇ ನಿರ್ಬಂಧವಿಲ್ಲ.
– ರಾಷ್ಟ್ರಪತಿಗಳ ಅಧಿಕಾರ ಬಳಕೆ ಕೆಟ್ಟದಲ್ಲ ಮತ್ತು ರಾಜ್ಯದ ಸರ್ವಸಮ್ಮತಿ ಬೇಕಾಗಿಲ್ಲ
– ಜಮ್ಮು-ಕಾಶ್ಮೀರ ಸಂವಿಧಾನದ ಅಗತ್ಯವಿಲ್ಲ
ADVERTISEMENT
ADVERTISEMENT