ದೆಹಲಿಯ ಜಹಂಗೀರ್ ಪುರಿ ಪ್ರದೇಶದಲ್ಲಿ ಶನಿವಾರ ಸಂಭವಿಸಿದ್ದ ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ ಕೋಮು ಸಂಘರ್ಷದಲ್ಲಿ ಭಾಗಿಯಾದವರ ಆಸ್ತಿಯನ್ನು ನೆಲಸಮ ಮಾಡಲು ಸರ್ಕಾರ ಆದೇಶ ನೀಡಿತ್ತು. ನೆಲಸಮ ಕೆಲಸ ಆರಂಭವಾದ ಕೆಲವೇ ತಾಸುಗಳಲ್ಲಿ ಸುಪ್ರಿಂಕೋರ್ಟ್ ಸರ್ಕಾರದ ಈ ನಿರ್ಧಾರಕ್ಕೆ ತಡೆ ನೀಡಿದೆ.
ಶನಿವಾರ ದೆಹಲಿಯ ಜಹಂಗೀಪುರದಲ್ಲಿ ಕೋಮುಸಂಘರ್ಷದಿಂದ ಹಿಂಸಾಚಾರ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಐವರನ್ನು ಬಂಧಿಸಲಾಗಿದೆ.
ಇಂದು ಈ ಸಂಘರ್ಷದಲ್ಲಿ ಭಾಗಿಯಾದವ ಆಸ್ತಿ ಡೆಮಾಲಿಷನ್ ಮಾಡಲು ಸರ್ಕಾರ ಬುಲ್ಡೋಜರ್ಗಳನ್ನು ಕಳುಹಿಸಿತ್ತು. ಡೆಮಾಲಿಷನ್ ಕೆಲಸ ಆರಂಭವಾದ ಕೆಲವೇ ಒಂದೇ ತಾಸಿನಲ್ಲಿ ಸುಪ್ರಿಂಕೋರ್ಟ್ ಸರ್ಕಾರದ ಈ ನಿರ್ಧಾರಕ್ಕೆ ತಡೆ ನೀಡಿದೆ. ಅಲ್ಲದೇ, ನಾಳೆಯೇ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ.
ನಾಳೆಯ ವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ದೆಹಲಿ ಸರ್ಕಾರಕ್ಕೆ ಸುಪ್ರಿಂಕೋರ್ಟ್ ತಿಳಿಸಿದೆ.
ಜಹಾಂಗೀರ್ಪುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಕಾರ , ಶನಿವಾರ ಹನುಮ ಜಯಂತಿ ಮೆರವಣಿಗೆ ಶಾಂತಿಯುತವಾಗಿ ಆ ಪ್ರದೇಶದಲ್ಲಿ ಸಾಗುತ್ತಿತ್ತು, ಆದರೆ ಸಂಜೆ 6 ಗಂಟೆ ಸುಮಾರಿಗೆ ಸಿ-ಬ್ಲಾಕ್ನಲ್ಲಿರುವ ಮಸೀದಿಯ ಹೊರಗೆ ಬಂದಾಗ, ಅನ್ಸಾರ್ ತನ್ನ ನಾಲ್ಕೈದು ಸಹಚರೊಂದಿಗೆ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದವರ ಜೊತೆ ವಾಗ್ವಾದ ಆರಂಭಿಸಿದರು. ಈ ವಾಗ್ವಾದ ಕೂಡಲೇ ಹಿಂಸಾಚಾರಕ್ಕೆ ತಿರುಗಿತು ಮತ್ತು ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟವನ್ನು ಪ್ರಾರಂಭಿಸಿದರು ಎಂದು ಉಲ್ಲೇಖಿಸಲಾಗಿದೆ.
ಈ ಹಿಂಸಾಚಾರದಲ್ಲಿ 8 ಜನ ಪೊಲೀಸರನ್ನು ಒಳಗೊಂಡಂತೆ 9 ಜನರಿಗೆ ಗಾಯಗಳಾಗಿವೆ. ಒಟ್ಟು 25 ಜನರನ್ನು ಪೊಲೀಸರು ಬಂದಿಸಿದ್ದಾರೆ.