ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನೇಮಕ ಮಾಡಿದೆ.
ಮಹಿಳಾ ದಿನಾಚರಣೆಯ ದಿನದಂದೇ ಕರ್ನಾಟಕ ಮೂಲದ ಸುಧಾ ಮೂರ್ತಿಯವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನೇಮಕ ಮಾಡಿದ್ದಾರೆ.
ಈ ಬಗ್ಗೆ ಟ್ವೀಟಿಸಿರುವ ಪ್ರಧಾನಿ ಮೋದಿ ಅವರು ಸುಧಾ ಮೂರ್ತಿಯವರನ್ನು ರಾಜ್ಯಸಭೆಗೆ ನೇಮಕ ಮಾಡಿದ್ದರಿಂದ ರಾಷ್ಟ್ರದ ನಿರ್ಮಾಣದಲ್ಲಿ ನಾರಿ ಶಕ್ತಿಯ ಅನಾವರಣ ಆಗಲಿದೆ ಎಂದು ಹೇಳಿದ್ದಾರೆ.
https://x.com/narendramodi/status/1766002676070813995?s=20
ರಾಜ್ಯಸಭೆಯ ಒಟ್ಟು 245 ಸಂಸದರ ಪೈಕಿ ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ 12 ಮಂದಿಯನ್ನು ನಾಮ ನಿರ್ದೇಶನ ಮಾಡಬಹುದು.
ಈ ಹಿಂದೆ ಮೋದಿ ಸರ್ಕಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮಕರಣ ಮಾಡಿತ್ತು.