ನಮ್ಮ ಪುರುಷರು ಸೋತರು..! ನಮ್ಮ ಯುವತಿಯರು ಗೆದ್ದರು..! ಎರಡು ಕಪ್​ಗಳು..!

ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪೈನಲ್​ನಲ್ಲಿ ಭಾರತ 209 ರನ್​ಗಳಿಂದ ಸೋತಿದೆ. ಈ ಮೂಲಕ ಕಾಂಗರೂ ನಾಡಿನ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಕಿರೀಟ ಗೆದ್ದುಕೊಂಡಿದೆ.

ಓವಲ್​ನಲ್ಲಿ ನಡೆದ ಅಂತಿಮ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 469 ರನ್​ಗೆ ಆಲೌಟಾದ್ರೆ ಎರಡನೇ ಇನ್ನಿಂಗ್ಸ್​ನಲ್ಲಿ 8 ವಿಕೆಟ್​ಗೆ 270 ರನ್​ ಗಳಿಸಿ ಡಿಕ್ಲೇರ್​ ಮಾಡಿಕೊಂಡಿತ್ತು.

ಭಾರತ ಮೊದಲ ಇನ್ನಿಂಗ್ಸ್​​ನಲ್ಲಿ 296 ರನ್​ಗೆ ಆಲೌಟಾಯಿತು. ಗೆಲುವಿಗೆ 444 ರನ್​ಗಳ ಗುರಿ ಹೊಂದಿದ್ದ ಭಾರತ ಎರಡನೇ ಇನ್ನಿಂಗ್ಸ್​​ನಲ್ಲಿ 234 ರನ್​ಗೆ ಸರ್ವ ಪತನ ಕಂಡಿತು.

ಮೊದಲ ಬಾರಿಗೆ ಏಷ್ಯಾ ಕಪ್​ ಗೆದ್ದ ಯುವತಿಯರು:

ಭಾರತದ ಯುವತಿಯರ ಹಾಕಿ ಆಟಗಾರರು ಮೊದಲ ಬಾರಿಗೆ ಏಷ್ಯಾ ಕಪ್​ ಗೆದ್ದಿದ್ದಾರೆ. ಇವತ್ತು ನಡೆದ ಫೈನಲ್​ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 2-1 ಗೋಲುಗಳ ಅಂತರದಲ್ಲಿ ಸೋಲಿಸಿದ್ದಾರೆ. 

ಭಾರತದ ಪರ ಅನು ಮತ್ತು ನೀಲಂ ತಲಾ ಒಂದೊಂದು ಗೋಲು ಬಾರಿಸಿದರು.

ಗೆದ್ದ ಹಾಕಿ ಆಟಗಾರರ ತಂಡದ ಸದಸ್ಯರಿಗೆ ತಲಾ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.

ಯುವತಿಯರ ಈ ಐತಿಹಾಸಿಕ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೊಂಡಾಡಿ ಅಭಿನಂದಿಸಿದ್ದಾರೆ.