ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ – ಸಿಎಂ ಸಿದ್ದರಾಮಯ್ಯ ಸರ್ಕಾರ ಆದೇಶ

ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಹುದ್ದೆಗಳು ಖಾಲಿ ಇರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಸಿಎಂ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ.

ಖಾಲಿ ಇರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಹೊರಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.

ಆಡಳಿತಾಧಿಕಾರಿಗಳು ನೇಮಕಗೊಂಡಿರುವ ನಗರ ಸ್ಥಳೀಯ ಸಂಸ್ಥೆಗಳು:

ನಗರಸಭೆ:

ಹುಣಸೂರು, ನಿಪ್ಪಾಣಿ, ನಂಜನಗೂಡು, ಗೋಕಾಕ, ಉಳ್ಳಾಲ, ಪುತ್ತೂರು

ಪುರಸಭೆ:

ಚಿಕ್ಕೋಡಿ, ಕೊಣ್ಣೂರು, ಮೂಡಲಗಿ, ಬೈಲಹೊಂಗಲ, ರಾಮದುರ್ಗ, ಸಂಕೇಶ್ವರ, ಕಾರ್ಕಳ, ಹುಕ್ಕೇರಿ, ಕಡೂರು, ಕುಂದಾಪುರ, ಸಕಲೇಶಪುರ, ಸದಲಗಾ, ಸವದತ್ತಿ, ಹೊಳಲ್ಕೆರೆ, ಕುಡಚಿ, ಕೆ ಆರ್​ ನಗರ, ಬಂಟ್ವಾಳ, ಮೂಡಬಿದಿರೆ, ಚಿಂಚೋಳಿ, ಹೆಚ್​ಡಿ ಕೋಟೆ, ಪಿರಿಯಾಪಟ್ಟಣ, ಟಿ ನರಸೀಪುರ, ಚನ್ನರಾಯಪಟ್ಟಣ, ಹೊಳೆನರಸೀಪುರ, ಬನ್ನೂರು.

ಪಟ್ಟಣ ಪಂಚಾಯತಿ:

ಸೋಮವಾರ ಪೇಟೆ, ಖಾನಾಪುರ, ಸುಳ್ಯ, ಆಲೂರು, ಅರಕಲಗೂಡು, ಮುಲ್ಕಿ, ಬೆಳ್ತಂಗಡಿ