World Cup: ಬ್ಯಾಟ್ಸ್​​ಮನ್​ ಶುಭ್ಮನ್​ ಗಿಲ್​ಗೆ ಡೆಂಗ್ಯೂ

ಏಕದಿನ ವಿಶ್ವಕಪ್​ ಆರಂಭದ ದಿನವೇ ಭಾರತಕ್ಕೆ ಆಘಾತ. ಬ್ಯಾಟ್ಸ್​ಮನ್​ ಶುಭ್ಮನ್​ ಗಿಲ್​ ಅವರಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಭಾರತ ಆಡಲಿರುವ ಮೊದಲ ಪಂದ್ಯಕ್ಕೆ ಗಿಲ್​ ಅವರು ಅಲಭ್ಯರಾಗುವ ಸಾಧ್ಯತೆ ಇದೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ಮೊದಲ ವಿಶ್ವಕಪ್​ ಪಂದ್ಯವನ್ನು ಆಡಲಿದೆ. 

ಇವತ್ತು ಮತ್ತೊಂದು ಬಾರಿ ಡೆಂಗ್ಯೂ ಪರೀಕ್ಷೆಯ ಬಳಿಕ ಗಿಲ್​ ಅವರ ಅಲಭ್ಯತೆಯ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.

ಒಂದು ವೇಳೆ ಗಿಲ್​ ಅವರು ಅಲಭ್ಯರಾದರೆ ಆಗ ಕೆ ಎಲ್​ ರಾಹುಲ್​ ಅಥವಾ ಇಶಾನ್​ ಕಿಸಾನ್​ ಅವರು ನಾಯಕ ರೋಹಿತ್​ ಶರ್ಮಾ ಅವರೊಂದಿಗೆ ಇನ್ನಿಂಗ್ಸ್​ ಆರಂಭಿಸುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here