IPL: ಒಂದೇ ದಿನ 6 ದಾಖಲೆ ಸೃಷ್ಟಿಸಿದ ಶುಭ್​ಮನ್​ ಗಿಲ್​..!

ಗುಜರಾತ್​ ಟೈಟನ್ಸ್ ಆಟಗಾರ​ ಶುಭ್​ಮನ್​ ಗಿಲ್​ ಒಂದೇ ದಿನ 6 ದಾಖಲೆ ಸೃಷ್ಟಿಸಿದ್ದಾರೆ.​ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಗಿಲ್​ ಶತಕ ಬಾರಿಸಿದ್ದಾರೆ. ಈ ಐಪಿಎಲ್​ ಆವೃತ್ತಿಯಲ್ಲಿ ಗಿಲ್​ ಗಳಿಸಿದ ಮೂರನೇ ಶತಕ ಇದು.

ಶುಕ್ರವಾರ ಅಹಮದಾಬಾದ್​ನಲ್ಲಿ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ 60 ಎಸೆತಗಳಲ್ಲಿ ಗಿಲ್​ 129 ರನ್​ ಗಳಿಸಿದ್ದಾರೆ.

ಒಂದೇ ದಿನ ಗಿಲ್​ ಸೃಷ್ಟಿಸಿದ 6 ದಾಖಲೆಗಳು:
1. 129 ರನ್​ ಗಳಿಸುವ ಮೂಲಕ ಪ್ಲೇ ಆಫ್ ಪಂದ್ಯದಲ್ಲಿ ಅತೀ ಹೆಚ್ಚು ರನ್​ ಗಳಿಸಿದ ಎಂಬ ಹೆಗ್ಗಳಿಕೆ. 2014ರಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ಮತ್ತು ಸಿಎಸ್​ಕೆ ನಡುವಿನ ಪ್ಲೇ ಆಫ್​ ಪಂದ್ಯದಲ್ಲಿ ವೀರೇಂದ್ರ  ​ಸೆಹ್ವಾಗ್​ ಅವರು 122 ರನ್​ ಗಳಿಸಿದ್ದರು. ಈ ಮೂಲಕ ಗಿಲ್​ ಸೆಹ್ವಾಗ್​ ದಾಖಲೆ ಮುರಿದಿದ್ದಾರೆ.

2. ಐಪಿಎಲ್​ ಸರಣಿಯಲ್ಲೇ ಗಿಲ್​ 2ನೇ ಅತ್ಯಧಿಕ ರನ್​ ಗಳಿಸಿದ ಆಟಗಾರ. 2020ರಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಕೆ ಎಲ್​ ರಾಹುಲ್​ 132 ರನ್​ ಗಳಿಸಿದ್ದರು.

3. ನಿನ್ನೆ ನಡೆದ ಪಂದ್ಯದಲ್ಲಿ ಗಿಲ್​ ಅವರು 10 ಸಿಕ್ಸರ್​​ಗಳನ್ನು ಬಾರಿಸಿದ್ದಾರೆ. ಈ ಮೂಲಕ ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸರ್​ ಬಾರಿಸಿದ ದಾಖಲೆ ಮುರಿದಿದ್ದಾರೆ. ವೃದ್ಧಿಮಾನ್​ ಸಾಹಾ, ಕ್ರಿಸ್​ಗೇಲ್​, ವೀರೇಂದ್ರ ಸೆಹ್ವಾಗ್, ಶ್ಯಾನ್​ ವ್ಯಾಟ್ಸನ್​ ಒಂದೇ ಪಂದ್ಯದಲ್ಲಿ ತಲಾ 8 ಸಿಕ್ಸರ್​ ಬಾರಿಸಿದ ದಾಖಲೆ ಹೊಂದಿದ್ದರು.

4. ಗಿಲ್​ ಮತ್ತು ಸಾಯಿ ಸುದರ್ಶನ್​ ನಡುವಿನ 138 ರನ್​ಗಳ ಜೊತೆಯಾದ ಐಪಿಎಲ್​ ಪ್ಲೇ ಆಫ್​ನಲ್ಲೇ ಮೂರನೇ ಅತ್ಯಧಿಕ ಜೊತೆಯಾಟವಾಗಿದೆ.

5. ಐಪಿಎಲ್​ ಸೀಸನ್​ವೊಂದರಲ್ಲಿ ಅತ್ಯಧಿಕ ರನ್​ ಗಳಿಸಿರುವ ಮೂರನೇ ಆಟಗಾರ ಗಿಲ್​. ಐಪಿಎಲ್​ನಲ್ಲಿ ಗಿಲ್​ 851 ರನ್​ ಗಳಿಸಿದ್ದಾರೆ. ವಿರಾಟ್​ ಕೊಹ್ಲಿ 2016ರ ಸೀಸನ್​ನಲ್ಲಿ 973 ರನ್​ ಮತ್ತು ಜಾಸ್​ ಬಟ್ಲರ್​ 2022ರ ಸೀಸನ್​ನಲ್ಲಿ 863 ರನ್​ ಗಳಿಸಿದ್ದರು.

6. ಗಿಲ್​ ಶತಕದ ಕಾರಣದಿಂದ ಗುಜರಾತ್​ ಟೈಟನ್ಸ್​ 20 ಓವರ್​​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 233 ರನ್​ ಗಳಿಸಿತು. ಇದು ಐಪಿಎಲ್​ ಪ್ಲೇ ಆಫ್​ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್​.